ನಂಬಿಕೆ, ತಾಳ್ಮೆ ಇರಬೇಕು.. ಟೈಂ ತಗೊಂಡ್ರೂ ನಿಜ ಯಾವತ್ತೂ ಆಚೆ ಬರುತ್ತೆ: ರಾಗಿಣಿ

– ಡ್ರಗ್ಸ್ ಕೇಸ್ ಖುಲಾಸೆ ಆಗಿರುವ ಬಗ್ಗೆ ನಟಿ ಫಸ್ಟ್ ರಿಯಾಕ್ಷನ್

ಯಾವಾಗಲೂ ನಂಬಿಕೆ ಮತ್ತು ತಾಳ್ಮೆ ಎನ್ನುವುದು ಇರಬೇಕು. ಸ್ವಲ್ಪ ಟೈಂ ತೆಗೆದುಕೊಂಡ್ರೂ ಯಾವತ್ತಿದ್ದರೂ ನಿಜ ಆಚೆ ಬರುತ್ತದೆ. ಇದೀಗ ಬಂದಿದೆ ಎಂದು ಡ್ರಗ್ಸ್ ಕೇಸ್ ಖುಲಾಸೆ ಆಗಿರುವ ಬಗ್ಗೆ ನಟಿ ರಾಗಿಣಿ ದ್ವಿವೇದಿ (Ragini  Dwivedi) ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್

‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ದೇವರ ಮೇಲೆ ನಂಬಿಕೆ ಇದೆ. ನಂಬಿಕೆ ಮತ್ತು ತಾಳ್ಮೆ ಇರಬೇಕು. ಯಾವಾಗಲೂ ಹೇಳುವ ಹಾಗೆಯೇ ಸತ್ಯ ಯಾವತ್ತಿದ್ದರೂ ಹೊರ ಬರುತ್ತೆ, ಇದೀಗ ನಿಜ ಏನು ಅಂತ ಆಚೆ ಬಂದಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ಮುಗಿದಿದೆ. ಆ ಬಗ್ಗೆ ಈಗ ಮಾತಾಡೋದು ಬೇಡ. ಹೊಸ ವರ್ಷ, ಹೊಸ ಹೊಸ ಪ್ರಾಜೆಕ್ಟ್‌ಗಳು ಬರ್ತಿದೆ, ಸಿನಿಮಾಗಳು ರಿಲೀಸ್ ಆಗ್ತಿದೆ. ಒಳ್ಳೆಯ ವಿಷಯಗಳ ಬಗ್ಗೆ ಮಾತಾಡೋಣ ಎಂದರು.ಇದನ್ನೂ ಓದಿ: ನಾಸಿಕ್-ಗುಜರಾತ್ ಹೆದ್ದಾರಿಯಲ್ಲಿ ಕಂದಕಕ್ಕೆ ಉರುಳಿದ ಖಾಸಗಿ ಬಸ್ – 7 ಸಾವು, 15 ಜನರ ಸ್ಥಿತಿ ಗಂಭೀರ