ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

ಮುಂಬೈ: ಮಹಾನ್ ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ನೋಡಲು ನಟ, ನಟಿಯರು, ರಾಜಕೀಯ ವ್ಯಕ್ತಿಗಳು, ಗಣ್ಯರು ಬಂದಿದ್ದರು. ಆದರೆ ಈ ವೇಳೆ ಬಾಲಿವುಡ್ ನಟ ಶಾರೂಖ್ ಅವರ ಫೋಟೋವೊಂದು ಶೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ವಿವಾದನ್ನು ಹುಟ್ಟುಹಾಕಿತ್ತು.

ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ವೇಳೆ ಶಾರೂಖ್ ಖಾನ್ ಪ್ರಾರ್ಥನೆ ಸಲ್ಲಿಸಿದ ರೀತಿ ಸೋಶಿಯಲ್ ಮೀಡಿಯಾದಲ್ಲಿ ತುಂಬ ಹೈಲೈಟ್ ಆಗಿದೆ. ಶಾರುಖ್ ಜೊತೆ ನಿಂತಿರುವ ಮಹಿಳೆಯನ್ನು ಗೌರಿ ಖಾನ್ ಎಂದು ನೆಟ್ಟಿಗರು ಭಾವಿಸಿದ್ದಾರೆ. ಆದರೆ ಅದು ಗೌರಿ ಖಾನ್ ಅಲ್ಲ.  ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

ಶಾರೂಖ್ ಖಾನ್ ಅವರು ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ನಿಂತು ಮುಸ್ಲಿಂ ಧರ್ಮದ ಪದ್ಧತಿಯಂತೆ ಪ್ರಾರ್ಥನೆ (ದುವಾ) ಸಲ್ಲಿಸಿದರು. ಅವರ ಪಕ್ಕದಲ್ಲಿ ಇದ್ದಿದ್ದ ಮ್ಯಾನೇಜರ್ ಪೂಜಾ ದದ್ಲಾನಿ ಹಿಂದೂ ಧರ್ಮದವರಾದ ಅವರು ಹಿಂದೂ ಪದ್ಧತಿಯಂತೆ ಕೈ ಮುಗಿದು ಪ್ರಾರ್ಥಿಸಿದರು. ಹಿಂದು, ಮುಸ್ಲಿಂ ಭಾವೈಕ್ಯತೆ ಒಂದೇ ಪ್ರೇಮ್‍ನಲ್ಲಿ ನೋಡಿದ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮ್ಯಾನೇಜರ್ ಪೂಜಾ ದದ್ಲಾನಿ ಅವರನ್ನು ನೋಡಿದ ಅಭಿಮಾನಿಗಳು ಶಾರೂಖ್ ಅವರ ಪತ್ನಿ ಗೌರಿ ಖಾನ್ ಎಂದು ಭಾವಿಸಿದ್ದರು.

ವೀಡಿಯೋದಲ್ಲಿ ಏನಿದೆ?: ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರೂಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರೂಖ್ ಖಾನ್ ಉಗಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

ಶಾರೂಖ್ ಖಾನ್ ಅನೇಕ ಸಿನಿಮಾಗಳ ಅನೇಕ ಗೀತೆಗಳಿಗೆ ಲತಾ ಮಂಗೇಶ್ಕರ್ ಧ್ವನಿ ಆಗಿದ್ದರು. ಲತಾ ಬಗ್ಗೆ ಬಾಲಿವುಡ್‍ನ ಎಲ್ಲ ತಾರೆಯರಿಗೂ ಅಪಾರ ಗೌರವ, ಅಭಿಮಾನ. ಆ ಕಾರಣದಿಂದ ಶಾರುಖ್ ಖಾನ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Comments

Leave a Reply

Your email address will not be published. Required fields are marked *