ಮಂಗಳೂರಲ್ಲಿ ಪಹಲ್ಗಾಮ್ ದಾಳಿ ಸಮರ್ಥಿಸಿಕೊಂಡ ದುಷ್ಟ – ಪೊಲೀಸರಿಂದ ಕಿಡಿಗೇಡಿಗಾಗಿ ಹುಡುಕಾಟ

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯನ್ನು (Pahalgam Attack) ಸಮರ್ಥಿಸಿಕೊಂಡು ಕಿಡಿಗೇಡಿಯೊಬ್ಬ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ವಿಕೃತಿ ಮೆರೆದಿರುವುದು ಮಂಗಳೂರಿನಲ್ಲಿ (Mangaluru) ನಡೆದಿದೆ.

ನಿಚ್ಚು ಮಂಗಳೂರು ಫೇಸ್‍ಬುಕ್ ಪೇಜ್‍ನಲ್ಲಿ, ಉಗ್ರರ ಕೃತ್ಯಕ್ಕೆ ಬೇರೆಯೇ ವ್ಯಾಖ್ಯಾನ ಮಾಡಲಾಗಿದೆ. 2023ರಲ್ಲಿ ಮಹಾರಾಷ್ಟದ ಪಾಲ್ಗರ್‌ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್‍ಗೆ ಸಾರ್ವಜನಿಕವಾಗಿ ಹಗ್ಗ ಹಾಕಲಿಲ್ಲ. ಆ ಕಾರಣಕ್ಕೆ ಕಾಶ್ಮೀರದಲ್ಲಿ ಈ ಕೃತ್ಯ ನಡೆದಿದೆ. ಪಾಲ್ಗರ್ ಘಟನೆಯಿಂದಾಗಿ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾನೆ.

ಪೋಸ್ಟ್ ಹಾಕಿದ ನಿಚ್ಚು ಮಂಗಳೂರು ಫೇಸ್‍ಬುಕ್ ಪೇಜ್ ವಿರುದ್ಧ ಉಳ್ಳಾಲದ ಸತೀಶ್ ಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 192 ಮತ್ತು 353 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‍ಬುಕ್ ಪೇಜ್ ಡಿಪಿಯಲ್ಲಿರುವ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ.

ಆರೋಪಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ತಿಳಿದು ಬಂದಿದೆ.