ಬೆಂಗಳೂರು-ಬೀದರ್ ವಿಶೇಷ ರೈಲು ಸೇವೆ ವಿಸ್ತರಣೆ

ಬೆಂಗಳೂರು/ಬೀದರ್: ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಹಬ್ಬದ ಸಂದರ್ಭದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVT Bengaluru) ಮತ್ತು ಬೀದರ್ (Bidar) ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಿದೆ.

ರೈಲು ಸಂಖ್ಯೆ 06539 :
ಇದೇ ಅಕ್ಟೋಬರ್ 31ರವರೆಗೆ ಬೆಂಗಳೂರಿನಿಂದ ಬೀದರ್‌ಗೆ ಸಂಚರಿಸಲು ನಿಗದಿಯಾಗಿದ್ದ ರೈಲನ್ನು ಇದೇ ನವೆಂಬರ್ 2ರಿಂದ ಡಿಸೆಂಬರ್ 28ರವರೆಗೆ ವಿಸ್ತರಿಸಲಾಗಿದೆ.ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

ರೈಲು ಸಂಖ್ಯೆ 06540:
ಅದೇ ರೀತಿ ಇದೇ ನವೆಂಬರ್ 1ರವರೆಗೆ ಬೀದರ್‌ನಿಂದ ಎಸ್‌ಎಂವಿಟಿ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು ಸೋಮವಾರ ಸಂಚರಿಸಲು ನಿಗದಿಯಾಗಿದ್ದ ರೈಲನ್ನು ಇದೇ ನವೆಂಬರ್ 3ರಿಂದ ಡಿಸೆಂಬರ್ 29ರವರೆಗೆ ವಿಸ್ತರಿಸಲಾಗಿದೆ. ಈ ವಿಸ್ತೃತ ಅವಧಿಯಲ್ಲಿ ಎರಡೂ ದಿಕ್ಕುಗಳಲ್ಲಿ ತಲಾ 17 ಟ್ರಿಪ್‌ಗಳು ಕಾರ್ಯಾಚರಣೆ ಮಾಡಲಾಗುತ್ತದೆ. ಈ ವಿಶೇಷ ರೈಲುಗಳು ಈಗಿರುವ ನಿಲುಗಡೆಗಳು, ವೇಳಾಪಟ್ಟಿ ಮತ್ತು ಬೋಗಿಗಳ ಸಂಯೋಜನೆಯಲ್ಲಿಯೇ ಸಂಚಾರ ಮುಂದುವರಿಸಲಿವೆ.