ಸ್ಫೋಟಕ ತುಂಬಿದ್ದ ಟ್ರಕ್ ಬೈಕಿಗೆ ಡಿಕ್ಕಿ- ಭಾರೀ ಸ್ಫೋಟದಿಂದ 17 ಮಂದಿ ದುರ್ಮರಣ

ಆಕ್ರಾ: ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್‍ಗೆ ಡಿಕ್ಕಿಯಾದ್ದು, ಭೀಕರ ಸ್ಫೋಟವಾಗಿದೆ. ಈ ಅವಘಡದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟದಿಂದಾಗಿ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ಕೆಲವು ಧರೆಗುರುಳಿದೆ. ರಾಜಧಾನಿ ಅಕ್ರಾದಿಂದ 300 ಕಿಲೋ ಮೀಟರ್ ದೂರದಲ್ಲಿ ಬೊಗೊಸೊ ಎಂಬ ನಗರದ ಹತ್ತಿರ ಈ ದುರಂತ ಸಂಭವಿಸಿದೆ. ದಟ್ಟ ಹೊಗೆ ಹೊರಸೂಸಿದ್ದು ಸ್ಥಳೀಯರು ಉಸಿರುಗಟ್ಟುವ ವಾತಾವರಣದಲ್ಲಿ ಹೊರಗೆ ಓಡುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆ ಸಿಬ್ಬಂದಿಗೆ ಬದುಕುಳಿದವರನ್ನು ಹೊರಗೆ ತರುವುದು ಕಷ್ಟಕರವಾಗಿತ್ತು. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗೆ ಟ್ರಕ್‍ನಲ್ಲಿ ಸ್ಫೋಟಕವನ್ನು ಹೊತ್ತೊಯ್ಯುತ್ತಿರುವಾಗ ಬೈಕ್ ಮತ್ತು ಇನ್ನೊಂದು ವಾಹನಕ್ಕೆ ವಿದ್ಯುತ್ ಪ್ರವಾಹಕ ಹತ್ತಿರ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ಗಾಯಗೊಂಡ 59 ಮಂದಿಯಲ್ಲಿ 42 ಮಂದಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ. ಇದುವರೆಗೆ 17 ಮಂದಿ ಮೃತರಾಗಿರುವುದು ದೃಢಪಟ್ಟಿದೆ. ಗಾಯಗೊಂಡ 59 ಮಂದಿಯನ್ನು ಕಾಪಾಡಲಾಗಿದೆ ಎಂದು ಘಾನಾ ಸರ್ಕಾರದ ಮಾಹಿತಿ ಸಚಿವ ಕೊಜೊ ಒಪ್ಪೊಂಗ್ ಕ್ರುಮ ತಿಳಿಸಿದ್ದಾರೆ. ಇದನ್ನೂ ಓದಿ:  ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

Comments

Leave a Reply

Your email address will not be published. Required fields are marked *