ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

Harak Singh

ಡೆಹರೂಡಾನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಅವರು ರಾಜ್ಯ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.

ಕೋಟ್‍ದ್ವಾರದ ಶಾಸಕ ಹರಕ್ ಸಿಂಗ್ ರಾವತ್ ಅವರು ಆರು ವರ್ಷಗಳ ಕಾಲ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದು, ಇದೀಗ ಮಾಜಿ ಸಿಎಂ ಹರೀಶ್ ರಾವತ್, ಕಾಂಗ್ರೆಸ್ ಮುಖ್ಯಸ್ಥ ಗಣೇಶ್ ಗೋಡಿಯಾಲ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮಾರ್ಚ್‍ನಿಂದ ಶಾಲೆ, ವಿಶ್ವವಿದ್ಯಾಲಯ ಪುನಾರಂಭ

ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‍ನ ಕೆಲ ನಾಯಕರನ್ನು ಭೇಟಿ ಮಾಡಿದ ಹಿನ್ನೆಲೆ ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸುವಂತೆ ಶಿಫಾರಸ್ಸು ಮಾಡಿ ಪುಷ್ಕರ್ ಸಿಂಗ್ ದಾಮಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

ಇದೀಗ ಹರಕ್ ಸಿಂಗ್ ರಾವತ್ ಜೊತೆಗೆ ಇನ್ನೂ ಇಬ್ಬರು ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. 2016ರಲ್ಲಿ ಕಾಂಗ್ರೆಸ್ ನಾಯಕ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದು ಬಿಜೆಪಿಗೆ ಸೇರ್ಪಡೆಯಾದ ಹತ್ತು ಶಾಸಕರಲ್ಲಿ ಹರಕ್ ಸಿಂಗ್ ರಾವತ್ ಕೂಡ ಒಬ್ಬರಾಗಿದ್ದಾರೆ.

ಉತ್ತರಾಖಂಡ ವಿಧಾನಸಭೆ ಚುನಾವಣೆಯನ್ನು 2022ರ ಫೆಬ್ರವರಿ 14ರಂದು ಮೊದಲನೇ ಹಂತದಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಮಾರ್ಚ್ 10ರಂದು ಮತಗಳ ಎಣಿಕೆ ನಡೆಸಲಾಗುತ್ತದೆ.

Comments

Leave a Reply

Your email address will not be published. Required fields are marked *