Exclusive | ಧರ್ಮಸ್ಥಳ ಪ್ರಕರಣದ‌ ಅನಾಮಿಕನ ಹುಟ್ಟೂರಲ್ಲಿ ʻಪಬ್ಲಿಕ್‌ ಟಿವಿʼ – ಒಂದೂವರೆ ಲಕ್ಷ ಸಾಲ ಪಡೆದು ಎಸ್ಕೇಪ್‌ ಆಗಿದ್ದ ಮಾಸ್ಕ್‌ ಮ್ಯಾನ್‌

– ಮಂಡ್ಯದ ಈ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೂ ಕಿರಿಕ್‌ ಮಾಡ್ಕೊಂಡಿದ್ದ ಮಾಸ್ಕ್‌ ಮ್ಯಾನ್‌
– ಚಿಕ್ಕ ವಯಸ್ಸಿನಲ್ಲೇ ಮದ್ವೆ, ಕೆಲಸವಿಲ್ಲದೇ ಉಂಡಾಣಿ ಗುಂಡನಂತಿದ್ದ ದೂರುದಾರ

ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳನ್ನು ಬಯಲಿಗೆಳೆಯುತ್ತಿರುವ ನಿಮ್ಮ ʻಪಬ್ಲಿಕ್‌ ಟಿವಿʼ ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ ಕುರಿತು ಇನ್ನಷ್ಟು ಎಕ್ಸ್‌ಕ್ಲೂಸಿವ್‌ ಮಾಹಿತಿಗಳನ್ನ ಬಯಲಿಗೆಳೆದಿದೆ. ಮಾಸ್ಕ್‌ ಮ್ಯಾನ್‌ನ ಹುಟ್ಟೂರು ಯಾವುದು? ಆತ ಓದಿದ್ದೇನು? ಊರಲ್ಲಿ ಏನು ಕೆಲಸ ಮಾಡಿಕೊಂಡಿದ್ದ? ಎಂಬೆಲ್ಲ ಮಾಹಿತಿಗಳನ್ನ ಬಹಿರಂಗಪಡಿಸಿದೆ.

ಹೌದು. ಬುರುಡೆ ಪ್ರಕರಣದ ಮಾಸ್ಕ್‌ ಮ್ಯಾನ್‌ (Mask Man) ಮೂಲತಃ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳದವನಂತೆ. 1ನೇ ತರಗತಿಯಿಂದ 3ನೇ ತರಗತಿವರೆಗೆ ಇದೇ ಗ್ರಾಮದಲ್ಲಿ ವಿದ್ಯಾಭ್ಯಾಸ ಕೂಡ ಮಾಡಿಕೊಂಡಿದ್ದ. ಈತನ ತಂದೆ-ತಾಯಿಗೂ ಒಳ್ಳೆಯ ಹೆಸರಿದೆ. 1994ರ ವರೆಗೆ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದಲ್ಲಿಲ್ಲೇ ಇದ್ದ. ಇಲ್ಲಿದ್ದಾಗ ಉಂಡಾಣಿ ಗುಂಡನ ರೀತಿ ಇದ್ದ. ಏನು ಕೆಲಸ ಮಾಡದೇ ಬೀದಿ ಬೀದಿ ತಿರುಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ ಅಂತ ಖುದ್ದು ಅಲ್ಲಿನ ಗ್ರಾಮಸ್ಥರೇ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

ಸರ್ಕಾರಿ ಜಾಗ ಬರೆದುಕೊಡುವಂತೆ ಕೇಳಿದ್ದ
ಮೊದಲು ಮುಸುಕುದಾರಿ ಅಣ್ಣ ತನ್ಯಾಸಿ ಧರ್ಮಸ್ಥಳಕ್ಕೆ ಹೋಗಿದ್ದ. ಬಳಿಕ ಈ ಅನಾಮಿಕ ಕೂಡ 1994ರಲ್ಲಿ ಧರ್ಮಸ್ಥಳಕ್ಕೆ ಹೋದ. 2014ರಲ್ಲಿ ಇದೇ ಗ್ರಾಮಕ್ಕೆ ಅನಾಮಿಕ ಮೂರನೇ ಹೆಂಡತಿಯ ಜೊತೆ ಗ್ರಾಮಕ್ಕೆ ವಾಪಸ್ಸಾಗಿದ್ದ. ಈ ವೇಳೆ ಒಂದು ವರ್ಷ ಇದೇ ಗ್ರಾಮದಲ್ಲಿ ವಾಸವಿದ್ದ. ಈ ವೇಳೆ ಸರ್ಕಾರಿ ಜಾಗದಲ್ಲಿ ಗ್ರಾ.ಪಂ ನಿಂದ ಮಾಸ್ಕ್‌ ಮ್ಯಾನ್‌ಗೆ ಶೆಡ್‌ ಕೂಡ ಹಾಕಿಕೊಡಲಾಗಿತ್ತು. ಕೆಲ ದಿನಗಳ ನಂತರ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಶೆಡ್ ಜಾಗವನ್ನು ನನ್ನ ಹೆಸರಿಗೆ ಬರೆದುಕೊಡಿ ಎಂದು ಗಲಾಟೆ ಕೂಡ ಮಾಡಿಕೊಂಡಿದ್ದ. ಆಗ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡು ಊರಿಂದ ಹೋರಟುಹೋಗಿದ್ದ. ಕಳೆದ ವರ್ಷದ ಪಿತೃಪಕ್ಷದ ವೇಳೆ ಇದೇ ಗ್ರಾಮಕ್ಕೆ ಮತ್ತೆ ಬಂದಿದ್ದ. ಈಗ ಧರ್ಮಸ್ಥಳದಲ್ಲಿ ಪ್ರತ್ಯಕ್ಷವಾಗಿ ಈ ರೀತಿ ಮಾತನಾಡ್ತಿರೋದು ತಪ್ಪು ಅಂತ ಗ್ರಾಮಸ್ಥರು ಎಳೆಎಳೆಯಾಗಿ ಮಾಸ್ಕ್‌ ಮ್ಯಾನ್‌ ಬಗೆಗಿನ ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.

ಧರ್ಮಸ್ಥಳದ ಬಗ್ಗೆ ಸುಳ್ಳುಗಳನ್ನೇ ಆತ ಹೇಳ್ತಿದ್ದಾನೆ. ದುಡ್ಡಿಗಾಗಿ ಈ ರೀತಿಯ ಕೆಲಸ ಮಾಡ್ತಾ ಇದ್ದಾನೇನೋ ಅನಿಸ್ತಿದೆ ಅಂತ ಅನಾಮಿಕನ ವಿರುದ್ಧ ಗ್ರಾಮಸ್ಥರ ಆಕ್ರೋಶದ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್‌

ಗ್ರಾಮದ ಮುಖಂಡನಿಗೆ ಒಂದೂವರೆ ಲಕ್ಷ ಪಂಗನಾಮ
2014ರಲ್ಲಿ ಗ್ರಾಮಕ್ಕೆ ವಾಪಸ್ಸಾದಾಗ ಹಸು ಸಾಕಬೇಕು ಎಂದಿದ್ದ. ಈ ವೇಳೆ ಬ್ಯಾಂಕ್‌ವೊಂದರಲ್ಲಿ ಗ್ರಾಮದ ಮುಖಂಡರು ಒಂದೂವರೆ ಲಕ್ಷ ಸಾಲ ಕೊಡಿಸಿದ್ದರು. ನಂತರ ಹಸುಗಳನ್ನು ಮಾರಿ ಎಸ್ಕೇಪ್‌ ಆದ. ಸಾಲಕೊಡಿಸಿದವರು ಸಾಲ ಕಟ್ಟುವ ಸ್ಥಿತಿ ಬಂತು. ಕಳೆದ ಒಂದೂವರೆ ವರ್ಷದ ಹಿಂದೆ ಮತ್ತೆ ಗ್ರಾಮದ ಒಬ್ಬರಿಗೆ ಕರೆ ಮಾಡಿ, ಲೋನ್ ತೆಗೆದುಕೊಳ್ಳಲು ಡಾಕ್ಯುಮೆಂಟ್ ಕೇಳಿದ್ದ. ನಂತರ ಡಾಕ್ಯುಮೆಂಟ್ ಕೊಡಲು ಆಗಲ್ಲ ಅಂತ ಗ್ರಾಮಸ್ಥರು ಹೇಳಿದ್ದರು ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.