ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?

ಬೆಂಗಳೂರು: ನಾನು ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ಸತ್ಯಾಸತ್ಯತೆ ಶೀಘ್ರದಲ್ಲೇ ಗೊತ್ತಾಗುತ್ತೆ. ಐಟಿ ಅಧಿಕಾರಿಗಳ ಮುಂದೆ ವಿಚಾರಣೆ ಮುಗಿಸುತ್ತೇನೆ. ನಂತರ ಜನರ ಮುಂದೆ ಬರುತ್ತೇನೆ. ನಾನು ಸ್ವಾಮೀಜಿ ಅಲ್ಲ, ಕೋಟಿ ಸಂಪಾದನೆಯನ್ನೂ ಮಾಡಿಲ್ಲ. ಮೆಡಿಕಲ್ ಕಾಲೇಜು ವಿಚಾರವಾಗಿ ಕಾಲ ಬಂದಾಗ ಉತ್ತರಿಸುತ್ತೇನೆ ಅಂತಾ ಡಿಕೆಶಿ ಗುರೂಜಿ ದ್ವಾರಕನಾಥ್ ಹೇಳಿದ್ದಾರೆ.

ಐಟಿ ದಾಳಿ ಬಳಿಕ ಪಬ್ಲಿಕ್ ಟಿವಿ ಅವರನ್ನು ಸಂದರ್ಶಿಸಿದಾಗ, ನಾನು ಜ್ಯೋತಿಷಿ ಅಂತ ಬೋರ್ಡ್ ಹಾಕ್ಕೊಂಡಿಲ್ಲ. ಕಂಪ್ಯೂಟರ್ ಇಟ್ಕೊಂಡಿಲ್ಲ. ಯಾರಿಂದಲೂ ದುಡ್ಡು ಪಡೆಯಲ್ಲ. ಅಲ್ಲದೇ ಜಾತಕವನ್ನು ಇಟ್ಕೊಂಡಿಲ್ಲ. ಯಾವುದೇ ವ್ಯಕ್ತಿ ಮೇಲೆ ಕೆಲ ಆರೋಪಗಳನ್ನು ಮಾಡಬೇಕಾದ್ರೆ ಆ ವ್ಯಕ್ತಿ ಅಂಥವನಾಗಿದ್ದರೆ ಮಾತ್ರ ಹೇಳಕ್ಕಾಗತ್ತೆ. ಹೀಗಾಗಿ ಶೀಘ್ರವಾಗಿ ನಿಮ್ಮ ಮುಂದೆ ಎಲ್ಲ ಮಾಹಿತಿಯನ್ನು ಕೊಡುತ್ತೇನೆ. ಐಟಿ ದಾಳಿಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಅಂತ ಹೇಳಿದ್ರು.

ಐಟಿ ಅಧಿಕಾರಿಗಳು 4 ಗಂಟೆ ಕಾಲ ನನ್ನ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ರು ಹಾಗೂ 2 ಗಂಟೆ ವಿಚಾರಿಸಿದ್ರು. ಅದರ ಬಗ್ಗೆ ಈಗ ಚರ್ಚೆ ಮಾಡಬಾರದು, ಅವರ ಕೆಲಸ ಅವರು ಮಾಡ್ಕೊಂಡು ಹೋಗಿದ್ದಾರೆ. ನಮಗ್ಯಾರಿಗೂ ಅವರು ತೊಂದರೆ ಕೊಟ್ಟಿಲ್ಲ. ಒಳಗೆ ಏನು ನಡೆದಿದೆ ಅಂತ ಅವರಿಗೆ ಹಾಗೂ ನನಗೆ ಗೊತ್ತು. ಅವರಿಗೆ ಪರಿಪೂರ್ಣ ಸಹಕಾರ ಕೊಟ್ಟಿದ್ದೇನೆ. ಸಂದರ್ಭ ಬಂದಾಗ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದ್ರು.

ಇದನ್ನೂ ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

ಐಟಿ ಅಧಿಕಾರಿಗಳು ದಾಳಿ ನಡೆಸಲು ನಿಖರ ಕಾರಣವೇನು ಅಂತ ಪಬ್ಲಿಕ್ ಟಿವಿ ಅವರನ್ನು ಪ್ರಶ್ನಿಸಿದಾಗ, ಅದನ್ನು ನೀವು ಕೇಳಬಾರದು, ನಾವು ಹೇಳಬಾರದು. ನೀವು ಇನ್ಮುಂದೆ ನನ್ನಲ್ಲಿ ನೇರ ಪ್ರಶ್ನೆಗಳನ್ನು ಕೇಳಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಿ, ಸತ್ಯವನ್ನೇ ಹೇಳಿ. ಯಾರಿಗೂ ಮನ ನೋಯಿಸಬೇಡಿ ಅಂತ ಅವರು ಹೇಳಿದ್ರು.

https://www.youtube.com/watch?v=8miivzWz4WQ

Comments

Leave a Reply

Your email address will not be published. Required fields are marked *