ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

ಕೀವ್: ರಷ್ಯಾ ದಾಳಿಯಿಂದ ಕೀವ್ ನಗರವನ್ನು ರಕ್ಷಿಸಲು ಉಕ್ರೇನ್‍ನ ಮಾಜಿ ಟೆನ್ನಿಸ್ ಆಟಗಾರ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಟೆನ್ನಿಸ್ ರಾಕೆಟ್ ಹಿಡಿದ ಕೈಯಲ್ಲಿ ಗನ್ ಹಿಡಿದು ಹೋರಾಡಲು ಮುಂದಾಗಿದ್ದಾರೆ.

ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಕೀವ್ ನಗರ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಈ ನಡುವೆ ಕೀವ್ ವಶಪಡಿಸಿಕೊಳ್ಳಲು ರಷ್ಯಾ ಕ್ಷಿಪಣಿ, ಬಾಂಬ್‍ಗಳ ಸುರಿಮಳೆ ಸುರಿಸುತ್ತಿದೆ. ಹಾಗಾಗಿ ಕೀವ್ ನಗರವನ್ನು ರಷ್ಯಾದಿಂದ ಉಳಿಸಿಕೊಳ್ಳಲು ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಶಸ್ತ್ರಸಜ್ಜಿತನಾಗಿ ನಿಂತಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

ನಾನು ತಾಯ್ನಾಡಿನ ರಕ್ಷಣೆಗಾಗಿ ಮತ್ತೆ ಕೀವ್‍ಗೆ ಬಂದಿದ್ದೇನೆ. ಕೀವ್‍ನ ಜನ ಯುದ್ಧದಿಂದ ತತ್ತರಿಸಿ ಹೋಗಿದ್ದಾರೆ. ಕೀವ್ ರಕ್ಷಣೆಗಾಗಿ ಉಕ್ರೇನ್ ಸೈನಿಕರು ಹೋರಾಡುತ್ತಿದ್ದಾರೆ. ನನ್ನ ಮನೆಯ ಸದಸ್ಯರನ್ನು ರಕ್ಷಿಸಿದ ಬಳಿಕ ನಾನು ಇದೀಗ ದೇಶದ ರಕ್ಷಣೆಗಾಗಿ ಶಸ್ತ್ರಸ್ತ್ರ ಹಿಡಿದಿದ್ದೇನೆ. ಗನ್ ಹಿಡಿದು ಶೂಟಿಂಗ್ ಮಾಡುವ ಬಗ್ಗೆ ನಾನು ತರಬೇತಿ ಕೂಡ ಪಡೆದಿದ್ದೇನೆ. ನನಗೆ ಮಾಜಿ ಸೈನಿಕರೊಬ್ಬರು 5 ರಿಂದ 7 ದಿನಗಳ ಕಾಲ ತರಬೇತಿ ನೀಡಿದ್ದಾರೆ. ನಾನು ಇದೀಗ ಗನ್ ಹಿಡಿದು ಕೀವ್ ರಕ್ಷಣೆಗಾಗಿ ಮುಂದಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

ಅಲೆಕ್ಸಾಂಡರ್ ಡೊಲ್ಗೊಪೊಲೊವ್ 2012ರಲ್ಲಿ ವಿಶ್ವ ಟೆನ್ನಿಸ್ ರ್ಯಾಂಕಿಂಗ್‍ನಲ್ಲಿ 12 ಸ್ಥಾನ ಪಡೆದಿದ್ದರು. ಆ ಬಳಿಕ 2021ರಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದರು. ಇದೀಗ ಉಕ್ರೇನ್ ರಕ್ಷಣೆಗಾಗಿ ಗನ್ ಹಿಡಿದಿದ್ದಾರೆ. ಈ ಮೊದಲು ಉಕ್ರೇನ್‍ನ ಹಲವು ಕ್ರೀಡಾಪಟುಗಳು ಉಕ್ರೇನ್ ಸೈನ್ಯದೊಂದಿಗೆ ಕೈ ಜೋಡಿಸಿದ್ದು, ಎರಡು ಬಾರಿ ಒಲಿಂಪಿಕ್ಸ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ವಿಜೇತ ವಾಸಿಲಿ ಲೊಮಾಚೆಂಕೊ ಮತ್ತು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಓಲೆಕ್ಸಾಂಡರ್ ಉಸಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

Comments

Leave a Reply

Your email address will not be published. Required fields are marked *