ಮೋದಿಯನ್ನು `ಸೈತಾನ್’ಗೆ ಹೋಲಿಸಿದ ಪಾಕ್ ಮಾಜಿ ಕ್ರಿಕೆಟಿಗ – ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಪಾಕಿಸ್ತಾನದ (Pakistan) ಮಾಜಿ ಕ್ರಿಕೆಟಿಗ ಸಾಯಿದ್‌ ಅನ್ವರ್ (Saeed Anwar) ಆಕ್ಷೇಪಾರ್ಹ ಹೇಳಿಕೆ ನೀಡಿ, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ ಅನ್ವರ್, ಮೋದಿ ಅವರನ್ನ `ಸೈತಾನ್’ ಎಂದು ಕರೆದಿದ್ದು, ನಾಲಿಗೆ ಹರಿಬಿಟ್ಟಿದ್ದಾರೆ. ಆಜಾನ್ ಕೂಗುವ ವೇಳೆ ಮೋದಿ ಎಷ್ಟು ಬಾರಿ ತಮ್ಮ ಭಾಷಣ ನಿಲ್ಲಿಸಿದ್ರೂ, ಸೈತಾನ್ ಆವಾಹಿಸಿಕೊಂಡ ಹಿಂದೂವಾಗಿಯೇ ಉಳಿಯುತ್ತಾರೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರನ್ನೂ ಟೀಕಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು

NARENDRA MODI 12

ಗುಜರಾತಿನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಆಜಾನ್ (ಮುಸ್ಲಿಮರ ಪ್ರಾರ್ಥನೆಗೆ) ಕೇಳಿಬರುತ್ತಿದ್ದ ವೇಳೆ ಮೋದಿ ತಮ್ಮ ಭಾಷಣಕ್ಕೆ ವಿರಾಮ ಕೊಟ್ಟಿದ್ದರು. ಜೊತೆಗೆ ಆಜಾನ್‌ಗಾಗಿ ಎಷ್ಟು ಬಾರಿ ಭಾಷಣ ನಿಲ್ಲಿದರೂ ಪರ್ವಾಗಿಲ್ಲ ಎಂದು ಹೇಳಿದ್ದರು. ಈ ಘಟನೆಯನ್ನ ಉಲ್ಲೇಖಿಸಿ ಸಯೀದ್ ಟೀಕಿಸಿದ್ದಾರೆ.

ಈ ಹೇಳಿಕೆ ವಿರುದ್ಧ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೈತಾನ್ ಆವಾಹಿಸಿರುವುದು ಮೋದಿಗಲ್ಲ. ಧರ್ಮಾಂಧತೆಯ ಅಮಲಿನಲ್ಲಿ ಕೋಮು ದ್ವೇಷವನ್ನು ಹಬ್ಬಿಸುತ್ತಿರೋ ಸಯೀದ್ ಅನ್ವರ್‌ಗೆ ಸೈತಾನ್ ಆವಾಹಿಸಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆ

Bilawal Bhutto Narendra Modi

ಈ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Bilawal Bhutto) ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೋದಿಯನ್ನು ಟೀಕಿಸಿ ಆಕ್ರೋಶಕ್ಕೆ ಗುರಿಯಾಗಿದ್ದರು. `ಭಾರತಕ್ಕಿಂತಲೂ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ನಮಗೆ ಭಯೋತ್ಪಾದನೆಯನ್ನು ಬೆಂಬಲಿಸಲು ಯಾವುದೇ ಕಾರಣವಿಲ್ಲ. ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಇನ್ನೂ ಜೀವಂತವಾಗಿದ್ದಾನೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು.

ಸದ್ಯ ಪಾಕಿಸ್ತಾನ ಆರ್ಥಿಕ ದಿವಾಳಿಯಾಗಿದ್ದು, ಮೋದಿ ಅವರೇ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಾರೆ ಅನ್ನೋ ಮಾತುಕಳು ಕೇಳಿಬರುತ್ತಿವೆ. ಈ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗನ ಹೇಳಿಗೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *