ಧಾರವಾಡ ದುರಂತ – ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಅರೆಸ್ಟ್

ಧಾರವಾಡ: ನಗರದಲ್ಲಿ ನಡೆದ ಕಟ್ಟಡ ಕುಸಿತ ಪ್ರಕರಣ ಹಿನ್ನೆಲೆ 5 ಮಂದಿ ಮಾಲೀಕರು ಹಾಗೂ ಓರ್ವ ಗುತ್ತಿಗೆಗಾರನ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ಇಂದು ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಮಾಜಿ ಸಚಿವ ವಿನಯ್ ಕುಲಕಣಿ ಮಾವ ಗಂಗಣ್ಣ ಸಿಂತ್ರೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಟ್ಟಡ ಕುಸಿತದಲ್ಲಿ ಈವರೆಗೇ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಅವಶೇಷದಡಿಯಲ್ಲಿ ಸಿಲುಕಿದ್ದ 61 ಮಂದಿಯಲ್ಲಿ ರಕ್ಷಿಸಲಾಗಿದೆ. ಮೂರು ದಿನಗಳಿಂದ ತಲೆ ಮರೆಸಿಕೊಂಡಿದ್ದ ಗಂಗಣ್ಣ ಸಿಂತ್ರೆ ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳಾದ ರವಿ ಸಬರದ, ಬಸವರಾಜ್ ನಿಗದಿ, ಮಹಾಬಳೆಶ್ವರ ಕುರಬಗುಡ್ಡಿ, ರಾಜು ಘಾಟಿನ, ಸೋಹನ್ ಹಾಗೂ ಕನ್​​ಸ್ಟ್ರಕ್ಷನ್​​​​​ ಮಾಲೀಕ ವಿವೇಕ ಪವಾರ ತಲೆಮರೆಸಿಕೊಂಡಿದ್ದಾರೆ. ಸದ್ಯ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

https://www.youtube.com/watch?v=kMDIyXmTOQE

Comments

Leave a Reply

Your email address will not be published. Required fields are marked *