ಕಾಂಗ್ರೆಸ್‍ನವರು ಸಂಪರ್ಕಿಸಿದ್ದರು, ಸಿಎಂ ಭೇಟಿ ತಪ್ಪಾ..?- ಸೋಮಶೇಖರ್ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್‍ನವರು (Congress) ನನ್ನನ್ನು ಸಂಪರ್ಕಿಸಿದ್ದರು. ನಾನು ಕಾಂಗ್ರೆಸ್‍ಗೆ ಹೋಗಲ್ಲ, ಬಿಜೆಪಿಯಲ್ಲೇ ಇದ್ದೇನೆ. ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ತಪ್ಪಾ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸಂಪರ್ಕ ಮಾಡ್ತಿದ್ದಾರಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಪ್ರಬಲ ನಾಯಕ ಅಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ (Yeshwanthpur Constituency) ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕ ಅಲ್ಲ. ಸಮುದಾಯದ ಪ್ರಬಲ ನಾಯಕನೂ ಅಲ್ಲ. ಸಂಪರ್ಕ ಮಾಡ್ತಾರೆ ಅಂದ್ರೆ ನಾನೂ ಕಾಂಗ್ರೆಸ್‍ನಲ್ಲಿ 20 ವರ್ಷ ಇದ್ದೆ. ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆ ಮೊದಲು ಸಂಪರ್ಕ ಮಾಡಿದ್ರು. ನಾನು ಕಾಂಗ್ರೆಸ್‍ಗೆ ಹೋದೆನಾ.? ನಾನು ಹೋದೆನಾ, ಹೋಗಲಿಲ್ಲ ಇಲ್ಲೇ ಇದ್ದೆ. ಆದರೂ ಕ್ರಿಯೇಟ್ ಮಾಡ್ತಾರೆ. ಸೋಮಶೇಖರ್ ಹೋಗ್ತಾನೆ, ಈ ವಾರದಲ್ಲಿ ಹೋಗ್ತಾನೆ ಅಂತ ಮಾಡಿದ್ರು. ಬೈರತಿ ಬಸವರಾಜ್ ಕೂಡ ಊರಲ್ಲಿ ಇರಲಿಲ್ಲ. ಯಡಿಯೂರಪ್ಪ ಅವರು ಕೂಡ ಕೇಳಿದ್ರು. ಅವರನ್ನ ನಾನು ಭೇಟಿಯಾಗ್ತೀನಿ ಎಂದು ಹೇಳಿದರು.

ಯಡಿಯೂರಪ್ಪ (BS Yediyurappa) ಅವರು ನಮ್ಮ ನಾಯಕರು. ನನ್ನನ್ನ ಬಿಜೆಪಿಗೆ ಕರೆತಂದವರು ಅವರೇ. ಸಹಕಾರ ಸಚಿವರನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದ್ರು. ಕೆಲಸ ಪ್ರಾಮಾಣಿಕವಾಗಿ ಮಾಡ್ತಾರೆ ಅಂತ ಹೇಳಿದ್ರು. ಯಡಿಯೂರಪ್ಪ ಅವರನ್ನು ಹೊರತಾಗಿ ನಾನು ಏನೂ ಮಾಡಲ್ಲ. ಬಾ ಮನೆಗೆ ಅಂತ ಕರೆದಿದ್ದಾರೆ. ಹೋಗಿ ಭೇಟಿಯಾಗಿ ಮಾತಾಡ್ತೇನೆ. ದುಡುಕಿ ನಿರ್ಧಾರ ಮಾಡಬೇಡ ಅಂತ ಹೇಳಿದ್ದಾರೆ. ಏನಾಗಿದೆ ಅಂತ ಮಾಹಿತಿ ಕೊಡ್ತೀನಿ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಎನ್‌ಇಪಿ ರದ್ದು; ರಾಜ್ಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ: ಡಿಕೆಶಿ

ತಮ್ಮ ವಿರೋಧಿಗಳ ವಿರುದ್ಧ ಶಿಸ್ತು ಕ್ರಮದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರನ್ನೂ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಅನ್ನೋದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಅನ್ನೋದು ನನ್ನ ಚಿಂತನೆ. ಇಬ್ನರನ್ನ ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ ಹೊರಗೂ ಇರತಕ್ಕಂತದ್ದು ಬದಲಾಗಲ್ಲ. ಬಿಜೆಪಿಯವರು ಎಲ್ಲಾ ವಾಟ್ಸಪ್ ಗ್ರೂಪಲ್ಲಿ ವೀಡಿಯೋ ಹಾಕ್ತಿದ್ದಾರೆ. ಈಶ್ವರಪ್ಪ ಹೇಳಿರುವಂತೆ ವಲಸೆ ಆಗಿರೋರು ಬರೋರು ಬರ್ತಾರೆ, ಹೋಗೋರು ಹೋಗ್ತಾರೆ ಅಂತ ಹೇಳಿಕೆಗಳನ್ನ ಅವೈಡ್ ಮಾಡಿ ಅನ್ನೋದು ನನ್ನ ಚಿಂತನೆ ಎಂದರು.

ನಾನಿರಬಹುದು, ಎಲ್ಲಾ ಪಕ್ಷದ ಕಾರ್ಯಕರ್ತರಿರಬಹುದು. ಒಳ್ಳೆಯ ವಾತಾವರಣ ಇತ್ತು. ಚುನಾವಣೆಗೆ ಮೊದಲು ಸೋಮಶೇಖರ್ (ST Somashekhar) ಈಗ ಹೋಗ್ತಾನೆ ಅಂತೆಲ್ಲಾ ಹೇಳಿದ್ರು. ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ. ಸಿದ್ದರಾಮಯ್ಯ ಜೊತೆ ಮಾತಾಡಿದ್ದೇ ತಪ್ಪಾ.?. ಸಿದ್ದರಾಮಯ್ಯ ಅವರ ಜೊತೆ ರಾಜಕಾರಣ ಮಾತಾಡಿಲ್ಲ. ನಮ್ಮ ಕ್ಷೇತ್ರದ ವಿಚಾರ ಮಾತ್ರ ಮಾತಾಡಿದ್ದೇನೆ. ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಎಂಪಿಗೆ ಹೋಗ್ತಾನೆ. ಮಗ ಎಂಎಲ್‍ಎ ಗೆ ನಿಲ್ತಾನೆ. ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲಾ. ಅದನ್ನ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಸಿ.ಟಿ ರವಿ ಅವರಿಗೆ ಹೇಳಿದ್ದೇನೆ. ಯಾರನ್ನೇ ಸಸ್ಪೆಂಡ್ ಮಾಡಿದ್ರೆ ಪರಿಹಾರ ಅಲ್ಲ ಎಂದರು. ಇದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ: ಎಸ್‍ಟಿ ಸೋಮಶೇಖರ್

ನೆಲಮಂಗಲ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಎಸ್ ಟಿ ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಕಾಪೆರ್Çರೇಟರ್ ರಾಜಣ್ಣ, ಆರ್ಯ ಶ್ರೀನಿವಾಸ್, ಕುಂಬಳಗೋಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕರಾಜು, ಅನಿಲ್ ಕುಮಾರ್, ಹೊಸಳ್ಳಿ ಸತೀಶ್ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]