ನನ್ನ ಹಿರಿತನ, ನಿಷ್ಠೆಗೆ ಬೆಲೆ ಇಲ್ಲವಾ – ಪರಮೇಶ್ವರ್ ಗೆ ಎಂ.ಬಿ ಪಾಟೀಲ್ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ಪ್ರಶ್ನೆಗಳನ್ನು ಕೇಳಿದ್ದಾರೆ.

ನನಗೆ ಸಚಿವ ಸ್ಥಾನ ತಪ್ಪಿಸಿದ್ದು ಯಾರು? ಎರಡನೇ ಸಂಪುಟ ವಿಸ್ತರಣೆಯಲ್ಲಿ ನನ್ನನ್ನು ಸಚಿವ ಮಾಡೋದಾದ್ರೆ ನನ್ನ ಹಿರಿತನ, ನಿಷ್ಠೆಗೆ ಬೆಲೆ ಇಲ್ಲವಾ? ಗುದ್ದಾಡಿ ಸಚಿವ ಸ್ಥಾನ ತಗೊಂಡೆ ಅನ್ನೋ ವ್ಯಂಗ್ಯದ ಮಾತು ನನ್ನ ಬಗ್ಗೆ ಕೇಳಿ ಬರಲ್ವಾ? ಒಂದು ವೇಳೆ ಮಂತ್ರಿ ಸ್ಥಾನಕ್ಕಾಗಿ ಗುದ್ದಾಡಿ ಪದವಿ ಪಡೆದ ಪಾಟೀಲ್ ಅನ್ನೋ ಹೆಸರು ಬರುತ್ತದೆ. ಇಂತಹ ಸ್ಥಿತಿ ನನಗೆ ಬೇಕಾ ಎಂದು ಬೆಂಗಳೂರಿನ ತಮ್ಮ ಮನೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ  ಮಾಜಿ ಸಚಿವ ಎಂಬಿ ಪಾಟೀಲ್ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂಬಿ ಪಾಟೀಲ್ ಮನವೊಲಿಕೆಗೆ ಡಿಕೆ ಶಿವಕುಮಾರ್, ಆರ್.ವಿ.ದೇಶಪಾಂಡೆ ಮತ್ತು ಕೆಜೆ ಜಾರ್ಜ್ ಕೂಡಾ ಆಗಮಿಸಿದ್ದರು. ಡಿಸಿಎಂ ಪರಮೇಶ್ವರ್ ಆಗಮನ ವೇಳೆ ಮನೆ ಬಾಗಿಲ ಒಳಗೆ ಪ್ರವೇಶಿಸುತ್ತಿದ್ದಂತೆ ಎಂಬಿ.ಪಾಟೀಲ್ ಬೆಂಬಲಿಗರು ಪರಮೇಶ್ವರ್ ಅವರನ್ನು ಅಡ್ಡಗಟ್ಟಿ ಮೊದಲು ನಮ್ಮ ಜೊತೆಗೆ ಮಾತಾಡಿ ಅಂತ ಘೋಷಣೆ ಕೂಗಿದ್ದಾರೆ.

ರಾಜ್ಯ ನಾಯಕರ ಯಾವುದೇ ಸಂಧಾನಕ್ಕೆ ಸ್ಪಂದಿಸದ ಪಾಟೀಲ್ ಇಂದು ಸಂಜೆ ದೆಹಲಿಗೆ ತೆರಳಲು ನಿರ್ಧರಿಸಿದ್ದು, ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *