‘ಪವಾಡ ಪುರುಷ’ನ ಕೃಪೆ ಡಿಕೆಶಿಯನ್ನು ಕಾಪಾಡುತ್ತಾ?

ನವದೆಹಲಿ: ಮೂರು ದಿನಗಳಿಂದ ವಿಚಾರಣೆ ನಡೆದರೂ ಕನಕಪುರದ ಬಂಡೆ ಮಾಜಿ ಸಚಿವ ಡಿ.ಕೆ ಶಿವಕುಮಾರ್‍ಗೆ ಜಾಮೀನು ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬಾಬಾ ಆರ್ಶೀವಾದ ಜೊತೆಗಿದ್ದರೆ ಬೇಲ್ ಸಿಗಬಹುದೇನೋ ಎಂದು ಡಿಕೆ ಎಲ್ಲೆ ಹೋದರೂ ಬಾಬಾನ ಜೊತೆ ಕರೆದುಕೊಂಡು ಹೋಗುತ್ತಿದ್ದಾರೆ. ಡಿಕೆಶಿ ಜೊತೆಗೆ ಇದ್ದರೂ ಬಾಬಾ ಮಾತ್ರ ಅವರ ಮೇಲೆ ಕರುಣೆ ತೋರುತ್ತಿಲ್ಲ, ಅಲ್ಲದೆ ಆಶೀರ್ವಾದವೂ ಮಾಡುತ್ತಿಲ್ಲ.

ಹೌದು. ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜಾಮೀನು ಸಿಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸಿದರೂ ವಿಚಾರಣೆ ಅಪೂರ್ಣವಾಗುತ್ತಿದ್ದರಿಂದ ಡಿಕೆ ತಿಹಾರ್ ಜೈಲಿನಲ್ಲಿ ಉಳಿಯುವಂತಾಗಿದೆ.

ಕಳೆದ ಮೂರು ದಿನಗಳಿಂದ ಡಿಕೆ ಶಿವಕುಮಾರ್ ನೀಮ್ ಕರೋಲಿ ಬಾಬಾ ಅವರ ಫೋಟೋ ಇಟ್ಟುಕೊಂಡು ಓಡಾಡುತ್ತಿದ್ದು, ತಮಗೆ ಒಳ್ಳೆಯದಾಗುತ್ತದೆ. ಜಾಮೀನು ಸಿಗಬಹುದು ಅನ್ನೊ ನಿರೀಕ್ಷೆಯಲ್ಲಿ ಫೋಟೋವನ್ನು ಜೊತೆಗಿಟ್ಟುಕೊಂಡಿದ್ದಾರೆ. ಫೋಟೋ ಜೊತೆಗಿಟ್ಟುಕೊಂಡು ಓಡಾಡುತ್ತಿದ್ದರೂ ಬಾಬಾ ಮಾತ್ರ ಆರ್ಶೀವಾದ ಮಾಡುತ್ತಿಲ್ಲ, ಜಾಮೀನು ಕೂಡ ಸಿಗುತ್ತಿಲ್ಲ. ಈ ಮೂಲಕ ಅನಾರೋಗ್ಯದ ಕಾರಣಕ್ಕಾದರೂ ಜಾಮೀನು ಸಿಕ್ಕಿ ಮನೆ ಕಡೆ ಬರಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಡಿಕೆಶಿಗೆ ನಿರಾಸೆಗಳೇ ಕಾಡುತ್ತಿವೆ.

ಡಿಕೆಶಿ ಅರೆಸ್ಟ್ ಆಗುತ್ತಿದ್ದಂತೆ ಅವರ ಕೆಲ ಅಭಿಮಾನಿಗಳು ಉತ್ತರಾಖಂಡ್ ರಾಜ್ಯದ ನೈನಿತಾಲ್‍ನಲ್ಲಿರುವ ಬಾಬಾನ ಆಶ್ರಮಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿ ಅಕ್ಷತೆ ತಂದಿದ್ದರು. ಇಡಿ ಕೊರ್ಟಿನಲ್ಲಿ ಡಿಕೆ ಭೇಟಿ ಆಗಿ ಆ ಅಕ್ಷತೆಯ ಜೊತೆಗೆ ಬಾಬಾನ ಫೋಟೋವನ್ನೂ ಕೊಟ್ಟಿದ್ದರು. ಈ ಫೋಟೋವನ್ನು ಇಟ್ಟುಕೊಳ್ಳಿ, ಎಲ್ಲವೂ ಒಳ್ಳೆದಾಗುತ್ತದೆ ಅಣ್ಣಾ ಅಂತ ಧೈರ್ಯ ತುಂಬಿದ್ದರು.

ನೀಮ್ ಕರೋಲಿ ಉತ್ತರ ಭಾರತದಲ್ಲಿ ಪ್ರಸಿದ್ಧ ಬಾಬಾ. ಉತ್ತರ ಪ್ರದೇಶ ಮೂಲದ ಈ ಸಂತನ ನಿಧನ ನಂತರ ಉತ್ತರಾಖಂಡ್ ನ  ನೈನಿತಾಲ್‍ನಲ್ಲಿ ನೀಮ್ ಕರೋಲಿ ಬಾಬಾ ಆಶ್ರಮ ಕಟ್ಟಲಾಯಿತು. ಅಲ್ಲಿಗೆ ಇವತ್ತಿಗೂ ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಆ ಪವಾಡ ಪರುಷನ ಕೃಪಾಕಟಾಕ್ಷದಿಂದಲಾದ್ರೂ ಡಿಕೆಶಿ ಜಾಮೀನು ಪಡೆದು ಹೊರಬರುತ್ತಾರಾ ಎಂಬುದನ್ನು ಕಾದು ನೋಡಬೇಕು.

Comments

Leave a Reply

Your email address will not be published. Required fields are marked *