ಚಡ್ಡಿಗಳು ಮಾಡುವುದು ಚಡ್ಡಿ ಕೆಲಸಾನೆ: ಸಿದ್ದರಾಮಯ್ಯ

Siddaramaiah

ಹುಬ್ಬಳ್ಳಿ: ನಾನು ಮೊದಲಿನಿಂದಲೂ ಆರ್‌ಎಸ್‌ಎಸ್ ವಿರೋಧಿ. ಅದರ ಬಗ್ಗೆ ಮಾತನಾಡಿದಾಗೆಲ್ಲಾ ಸುಟ್ಟು ಹೋಗ್ತೀನಿ ಅಂತಾರೆ, ಆದರೆ ನಾನಿನ್ನು ಚೆನ್ನಾಗಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

SIDDARAMAIAH

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೊದಲಿಂದಲೂ ಆರ್‌ಎಸ್‌ಎಸ್ ವಿರೋಧಿ, ಸರಸಂಘಚಾಲಕರು ಒಂದೇ ಜಾತಿಗೆ ಸೇರಿದವರು ಎಂಬ ಆರೋಪಕ್ಕೆ ಉತ್ತರವೇ ಇಲ್ಲ. ದಲಿತ, ಹಿಂದುಳಿದ ವರ್ಗದವರು ಯಾರೂ ಸರಸಂಘಚಾಲಕರನ್ನಾಗಿ ಮಾಡಿಲ್ಲ. ನಾನು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದಾಗೆಲ್ಲಾ ನಾನು ಸುಟ್ಟು ಹೋಗ್ತೀನಿ ಅಂತ ಬಿಜೆಪಿ ನಾಯಕರು ಹೇಳ್ತಿದ್ದಾರೆ. ಆದ್ರೆ ನಾನಿನ್ನು ಚೆನ್ನಾಗಿದ್ದೀನಿ ಸುಟ್ಟು ಹೋಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹನುಮಾನ್ ಪ್ರತಿಮೆಯ ಚಿನ್ನದ ಕವಚ ಅನಾವರಣಗೊಳಿಸಿದ ರಾಜ್ಯಪಾಲರು

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಬೇರೆ ಕೆಲಸ ಇಲ್ಲ. ಚಡ್ಡಿಗಳು ಮಾಡುವುದು ಚಡ್ಡಿ ಕೆಲಸವನ್ನೇ. ನನ್ನ ಆರೋಪ ಸತ್ಯವಾಗಿರೋದ್ರಿಂದ ಚಡ್ಡಿಗಳು ಮೌನವಾಗಿದ್ದಾರೆ ಎಂದು ಕುಟುಕಿದ್ದಾರೆ.

ಇದೇ ವೇಳೆ ರಾಜ್ಯಸಭೆ ಚುನಾವಣೆ ವಿಚಾರವಾಗಿ ಮಾತನಾಡಿ, ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಬೇಕು ಅನ್ನೋದು ನಮ್ಮ ಉದ್ದೇಶ. ಆದರೆ ಜೆಡಿಎಸ್ ಕೂಡಾ ಅಭ್ಯರ್ಥಿ ಹಾಕಿ ಚುನಾವಣೆ ಜಟಿಲಗೊಳಿಸಿದೆ. ಕೋಮುವಾದಿ ಅಭ್ಯರ್ಥಿ ಸೋಲಿಸುವ ಉದ್ದೇಶ ಇದ್ದಿದ್ದರೆ ಅಭ್ಯರ್ಥಿ ಹಾಕುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ – ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ

ಹೆಚ್.ಡಿ.ದೇವೆಗೌಡರು ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿದಿರಲಿಲ್ಲ. ಏಕೆಂದರೆ ದೇವೇಗೌಡರು ಗೆಲ್ಲಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶವಾಗಿತ್ತು. ನಾನು ಒಂದು ಕಲ್ಲಿನಿಂದ ಎರಡಕ್ಕಿ ಹೊಡೆದಿಲ್ಲ. ಕುಮಾರಸ್ವಾಮಿನೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Siddaramaiah

ವಿಮಾನ ನಿಲ್ದಾಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಸ್‌ವೈ ಭೇಟಿ ಆಕಸ್ಮಿಕ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಚರ್ಚೆಯೂ ಇಲ್ಲ. ಪರಸ್ಪರ ಉಭಯಕುಶಲೋಪರಿ ವಿಚಾರಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *