ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

ಲಕ್ನೋ: ಮದುವೆ ಮಂಟಪದೊಳಗೆ ನುಗ್ಗಿದ ಪಾಗಲ್ ಪ್ರೇಮಿ ತನ್ನ ಪ್ರೇಯಸಿಗೆ ಸಿಂಧೂರವನ್ನು ಇಟ್ಟ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

ಹೀರೋಯಿನ್ ಅನ್ನು ಹೀರೋ, ಮದುವೆ ಸಮಯದಲ್ಲಿ ಹೇಗಾದರೂ ಮಾಡಿ ವಿವಾಹ ಆಗುವ ದೃಶ್ಯಗಳನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯ ಮದುವೆ ನಿಲ್ಲಿಸಲು ಬಂದಿದ್ದಾನೆ. ಈ ವೇಳೆ ವಧುವಿನ ಕಡೆಯವರು ಪ್ರೇಮಿಯನ್ನು ತಡೆಯಲು ಮುಂದಾದಾಗ ವಧುವಿಗೆ ಬಲವಂತವಾಗಿ ಸಿಂಧೂರವನ್ನು ಇಟ್ಟಿದ್ದಾನೆ. ಈಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

ಡಿಸೆಂಬರ್ 1 ರಂದು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಈ ಘಟನೆ ನಡೆದಿದ್ದು, ವಧು-ವರರು ಮಾಲೆ ಹಾಕಿಕೊಳ್ಳುತ್ತಿದ್ದ ವೇಳೆ ವಧುವಿನ ಪ್ರೇಮಿ ಸ್ಥಳಕ್ಕೆ ಬಂದಿದ್ದಾನೆ. ಅಲ್ಲದೇ ಅವನು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಮುಖವನ್ನು ಮರೆಮಾಚುತ್ತಾ, ವಧುವಿನ ಹಣೆಯ ಮೇಲೆ ಬಲವಂತವಾಗಿ ಸಿಂಧೂರವನ್ನು ಹಾಕಲು ಪ್ರಯತ್ನಿಸಿದ್ದಾನೆ. ಇದನ್ನು ತಡೆಯಲು ಕುಟುಂಬದವರು ಮುಂದಾಗಿದ್ದು, ಜೇಬಿನಲ್ಲಿ ಇದ್ದ ಸಿಂಧೂರವನ್ನು ತೆಗೆದು ವಧುವಿನ ಹಣೆಗೆ ಇಟ್ಟಿದ್ದಾನೆ.

ವರದಿಗಳ ಪ್ರಕಾರ, ಆ ವ್ಯಕ್ತಿ ವಧುವಿನ ಮಾಜಿ ಪ್ರೇಮಿಯಾಗಿದ್ದು, ಹಣ ಸಂಪಾದಿಸಲು ಬೇರೆ ನಗರಕ್ಕೆ ಹೋಗಿದ್ದನು. ಅವನು ಇಲ್ಲದೇ ಇರುವುದನ್ನು ತಿಳಿದ ಯುವತಿಯ ಕುಟುಂಬ ಅವಳನ್ನು ಬೇರೆಯವರಿಗೆ ಮದುವೆ ಮಾಡಲು ನಿಶ್ಚಯಿಸಿದೆ. ಆದರೆ ಯುವತಿ ತನ್ನ ಹೆತ್ತವರಿಗೆ ಅರ್ಥಮಾಡಿಸಲು ಪ್ರಯತ್ನಿಸಿದರೂ, ಅವರು ಆಕೆಯ ಮಾತನ್ನು ಕೇಳಲಿಲ್ಲ. ಈ ಹಿನ್ನೆಲೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾಮಿಸಿದ ಪ್ರೇಮಿ ಮದುವೆಯನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

ವಿವಾಹದ ವೇಳೆ ಪ್ರೇಮಿ ವೇದಿಕೆಯ ಮೇಲೆ ಗಲಾಟೆ ಮಾಡಿದ್ದರಿಂದ ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅದು ಅಲ್ಲದೇ ಯುವತಿ ಮದುವೆಯಾದ ನಂತರ ಆತನನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *