ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು: ಸುದೀಪ್

– ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕಿಚ್ಚ

ಬೆಂಗಳೂರು: ಎಲ್ಲರ ಜೀವನದಲ್ಲಿ ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

soorappa babu

ಕಿಚ್ಚ ಅಭಿನಯದ ‘ಕೋಟಿಗೊಬ್ಬ-03’ ಸಿನಿಮಾ ರಿಲೀಸ್ ವೇಳೆ ಸ್ವಲ್ಪ ಸಮಸ್ಯೆ ಆಗಿತ್ತು. ಈ ವೇಳೆ ಕಿಚ್ಚನ ಅಭಿಮಾನಿಗಳು ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ದಿನ ತಡವಾಗಿ ಅಂದರೆ ಈ ಶುಕ್ರವಾರ ‘ಕೋಟಿಗೊಬ್ಬ-03’ ಸಿನಿಮಾವನ್ನು ರಿಲೀಸ್ ಮಾಡಲಾಯಿತು. ಈ ಗಲಾಟೆಯ ನಡುವೆಯೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಖುಷ್ ಆದ ಕಿಚ್ಚ ಇನ್‍ಸ್ಟಾಗ್ರಾಮ್ ನಲ್ಲಿ, ನನಗೆ ಬೆಂಬಲ ನೀಡಿದ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನೀವು ಅದ್ಭುತ ಮತ್ತು ನಿಮ್ಮ ಜೀವನದಲ್ಲಿ ಒಂದು ಸ್ಥಾನವನ್ನು ಗಳಿಸಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಅದನ್ನು ನಾನು ಗೌರವಿಸುತ್ತೇನೆ ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

 

View this post on Instagram

 

A post shared by KicchaSudeepa (@kichchasudeepa)

ಆ ಫೋಟೋದಲ್ಲಿಯೂ ಸುದೀಪ್, ಎಲ್ಲರೂ ತಮ್ಮ ಜೀವನಲ್ಲಿ ಕಠಿಣ ಸಮಯವನ್ನು ಎದುರಿಸಬೇಕು. ಅದನ್ನು ನಾವು ಶಾಂತಿಯಿಂದ, ನಗುನಗುತ ಎದುರಿಸಬೇಕು ಎಂದು ಬರೆದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

‘ಕೋಟಿಗೊಬ್ಬ-03’ ಈ ಗುರುವಾರ ರಿಲೀಸ್ ಆಗಬೇಕಿತ್ತು. ಆದರೆ ವಿತರಕರ ಸಮಸ್ಯೆಯಿಂದ ಒಂದು ದಿನ ತಡವಾಗಿ ಸಿನಿಮಾ ರಿಲೀಸ್ ಮಾಡಲಾಯಿತು. ಏನೇ ತೊಂದರೆಯಾದರೂ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೂ ‘ಕೋಟಿಗೊಬ್ಬ-03’ ಸಿನಿಮಾದ ತೊಂದರೆ ಇನ್ನೂ ಬಗೆಹರಿದಿಲ್ಲ. ಪ್ರಸ್ತುತ ಈ ವಿಚಾರ ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆಯಿದೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

Comments

Leave a Reply

Your email address will not be published. Required fields are marked *