ಬಂಡೆಕಲ್ಲಿನ ಮೇಲೆ ಪ್ರತಿದಿನ ಬಂದು ಗಂಟೆಗಟ್ಟಲೇ ಕೂರುತ್ತೆ ಚಿರತೆ- ವಿಡಿಯೋ ನೋಡಿ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈತಕೋಲ್ ಬಂದರು ಸಮೀಪದ ಬಂಡೆಯ ಮೇಲೆ ಪ್ರತಿ ದಿನ ಚಿರತೆಯೊಂದು ಬಂದು ಕೂರುತ್ತಿದೆ. ಇದನ್ನು ನೋಡಲು ಅನೇಕ ಜನರು ಜಮಾಯಿಸುತ್ತಿದ್ದಾರೆ.

ಪ್ರತಿದಿನ ಈ ಚಿರತೆಯು ಕಾಡಿನಿಂದ ನಾಡಿಗೆ ಬಂದು ಭೂದೇವಿ ದೇವಸ್ಥಾನದಿಂದ ಸಮೀಪದಲ್ಲಿ ಕಾಣುವ ಬಂಡೆಯ ಮೇಲೆ ಗಂಟೆಗಟ್ಟಲೇ ಕೂರುತ್ತದೆ. ಈ ಗುಡ್ಡದ ಕೆಳಭಾಗದಲ್ಲಿ ಬಂದರು ಹಾಗೂ ಜನವಸತಿ ಪ್ರದೇಶವಿದೆ. ಇದುವರೆಗೂ ಮನುಷ್ಯರಿಗೆ ಚಿರತೆ ತೊಂದರೆ ಕೊಟ್ಟಿಲ್ಲ. ತನಗೆ ಬೇಜಾರು ಬಂದಾಗ ಮರಳಿ ಕಾಡಿಗೆ ಹೋಗುತ್ತದೆ. ಆದರೂ ಚಿರತೆ ಜನರಿಗೆ ಭಯ ಹುಟ್ಟಿಸುತ್ತಿದೆ.

ಸ್ಥಳೀಯರಿಗೆ ಚಿರತೆಯನ್ನು ನೋಡುವುದೇ ಸಂಭ್ರಮವಾಗಿದ್ದು, ಪ್ರತಿ ದಿನವೂ ಚಿರತೆ ಬರುವಿಕೆಗೆ ಜನರು ಕಾಯುತ್ತಿರುತ್ತಾರೆ. ಈ ಕುರಿತು ಕಾರವಾರ ಅರಣ್ಯ ಇಲಾಖೆಗೆ ಮಾಹಿತಿಯಿದ್ದು, ಚಿರತೆ ಊರಿಗೆ ದಾಳಿಯಿಡದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ ಪ್ರತಿ ದಿನ ಮಧ್ಯಾಹ್ನ ವೇಳೆ ಚಿರತೆ ಬಂಡೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ವೇಳೆ ಗ್ರಾಮಕ್ಕೆ ಪ್ರವೇಶಿಸಿ ದನ, ಕರುಗಳನ್ನು ಕೊಲ್ಲುವ ಕುರಿತು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ತಕ್ಷಣವೇ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/yXgpKXsHtXk

Comments

Leave a Reply

Your email address will not be published. Required fields are marked *