ಬೆಳಗಾವಿ ಸೇರಿ 865 ಹಳ್ಳಿಗಳು ನಮಗೆ ಸೇರಬೇಕು – ಮಹಾರಾಷ್ಟ್ರ ಅಸೆಂಬ್ಲಿ ಸರ್ವಾನುಮತದ ನಿರ್ಣಯ

ಮುಂಬೈ: ಕನ್ನಡಿಗರ ಸ್ವಾಭಿಮಾನ, ಅಸ್ಮಿತೆಯನ್ನು ಮಹಾರಾಷ್ಟ್ರ ರಾಜಕಾರಣಿಗಳು ಕೆಣಕಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ(Belagavi Session) ನಡೆದಾಗಲೆಲ್ಲಾ ಗಡಿ ವಿಚಾರವನ್ನು ಕೆದಕುವುದು ಪುಂಡ ಮರಾಠಿಗರ ಕಾಯಕವಾಗಿಬಿಟ್ಟಿದೆ. ಕಳೆದ 20 ದಿನಗಳಿಂದ ಕರ್ನಾಟಕ-ಮಹಾರಾಷ್ಟ್ರ(Karnataka – Maharashtra) ಗಡಿಯಲ್ಲಿ ಬೂದಿಮುಚ್ಚಿದ ವಾತಾವರಣ ನಿರ್ಮಾಣವಾಗಿದೆ. ಗಡಿ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದೆ. ಆದರೂ ಹಿಂದಿನ ಉದ್ಧವ್ ಠಾಕ್ರೆ ಸರ್ಕಾರ ಮತ್ತು ಇಂದಿನ ಏಕನಾಥ್ ಶಿಂಧೆ ಸರ್ಕಾರ ಮತ್ತೆ ಕನ್ನಡಿಗರನ್ನು ಕೆಣಕಿದೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ 6 ಜನರ ಸಮಿತಿ ರಚಿಸಿ ಸದ್ಯದ ವಿವಾದ ತಣ್ಣಗಾಗಿಸುವಂತೆ ಸೂಚಿಸಿದ್ದರು. ಅದರೂ ʼಬೆಳಗಾವಿ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಸೋಮವಾರ ಮಾಜಿ ಸಿಎಂ ಉದ್ಧವ್ ಠಾಕ್ರೆ ಕೂಗೆಬ್ಬಿಸಿದ್ದರು. ಇವತ್ತು ಮಹಾರಾಷ್ಟ್ರ್ರ ಸಿಎಂ ಏಕನಾಥ್ ಶಿಂಧೆ(Eknath Shinde) ನಿರ್ಣಯ ಮಂಡಿಸಿದ್ದಾರೆ.

ಕರ್ನಾಟಕದ ಹಲವು ಗಡಿ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ನಾಗಪುರ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ನಿರ್ಣಯಗಳೇನು?
ಕರ್ನಾಟಕದ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಬೆಳಗಾವಿ, ನಿಪ್ಪಾಣಿ, ಭಾಲ್ಕಿ, ಕಾರವಾರ, ಬೀದರ್ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು.  ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

ಕರ್ನಾಟಕದಲ್ಲಿ ಮರಾಠಿಗರ ಸಂಖ್ಯೆ ಕಡಿಮೆಯಾಗಲು ಬಿಡಬಾರದು. ಗಡಿ ಭಾಗದ ಮರಾಠಿ ಭಾಷಿಕರ ಪರವಾಗಿ ಸರ್ಕಾರಿ ದೃಢವಾಗಿ ನಿಂತಿದೆ. ಕರ್ನಾಟಕದ ಮರಾಠಿ ಹಳ್ಳಿಗಳ ಇಂಚು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ.

ಸುಪ್ರೀಂಕೋರ್ಟ್‍ನಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಕರ್ನಾಟಕ ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡುತ್ತಿದೆ. ಕರ್ನಾಟಕ ಅಸೆಂಬ್ಲಿಯ ಖಂಡನಾ ನಿರ್ಣಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *