`ಹಿಂದೂ’ ಅಶ್ಲೀಲ ಪದ ಅನ್ನೋದು ಯಾವ ಪುಸ್ತಕದಲ್ಲಿದೆ ನನಗಂತೂ ಗೊತ್ತಿಲ್ಲ: ಡಿಕೆಶಿ

ಬೆಂಗಳೂರು: ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದಂತೆ `ಹಿಂದೂ’ (Hindu) ಅಶ್ಲೀಲ ಪದ ಅನ್ನೋದು ಯಾವ ಪುಸ್ತಕದಲ್ಲಿದೆ ಅಂತಾ ನನಗೂ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ ಶಿವಕುಮಾರ್ (Dk Shivakumar)  ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ (BJP) ಪ್ರತಿಭಟನೆಗೆ (Protest) ಪ್ರತಿಕ್ರಿಯಿಸಿದ ಡಿಕೆಶಿ, ಸತೀಶ್ ಜಾರಕಿಹೊಳಿ ಯಾವುದೋ ಪುಸ್ತಕದಲ್ಲಿದೆ ಅಂತ ಹೇಳ್ತಿದ್ದಾರೆ. ಯಾವ ಪುಸ್ತಕದಲ್ಲಿದೆ ನಂಗಂತೂ ಗೊತ್ತಿಲ್ಲ. ಇದನ್ನು ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಈಗಾಗಲೇ ಅವರ ಹೇಳಿಕೆಯನ್ನು ನಾವು ಸಮರ್ಥಿಸೋದಿಲ್ಲ ಅಂತ ಹೇಳಿಯಾಗಿದೆ. ಈಗಲೂ ಅವರು ಮತ್ತೆ ಅದನ್ನೇ ಸಮರ್ಥಿಸಿಕೊಳ್ತಿದ್ದರೆ ಗಮನಿಸಿ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿನಿಮಾವಾಗಲಿದೆ ವಿಜಯ್ ಮಲ್ಯ ವಂಚನೆ ಕಥೆ: ಮಲ್ಯ ಪಾತ್ರದಲ್ಲಿ ಅನುರಾಗ್

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದ ಪ್ರಧಾನಿಗಳು (Primeminister Of India) ರಾಜ್ಯಕ್ಕೆ ಬರುತ್ತಿದ್ದಾರೆ. ಅದಕ್ಕಾಗಿ ಸರ್ಕಾರದವರು ಶಾಲಾ, ಕಾಲೇಜು ಮಕ್ಕಳನ್ನು ಕರೆತರುವುದಕ್ಕೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳನ್ನು ಕರೆತರುವ ಬಗ್ಗೆ ಸುತ್ತೋಲೆಯನ್ನೇ ಹೊರಡಿಸಿದ್ದಾರೆ. ಬಿಜೆಪಿಯವರಿಗೆ ಇಂಥಾ ಗತಿ ಬಂತಾ? ಡಬಲ್ ಇಂಜಿನ್ ಸರ್ಕಾರದ ಸಾಧನೆ ತೋರಿಸಿ ಕಾರ್ಯಕ್ರಮ ಮಾಡಿ. ಅದನ್ನು ಬಿಟ್ಟು ಎಲೆಕ್ಷನ್ ಹತ್ತಿರ ಬರ್ತಿದೆ ಅಂತಾ ರಾಜಕೀಯವಾಗಿ ಶಾಲಾ ಮಕ್ಕಳನ್ನು ಬಳಸಿಕೊಳ್ಳೋದು ನಾಚಿಗೇಡಿನ ಸಂತತಿ. ಬಿಜೆಪಿ ದಿವಾಳಿಯಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ, ಪ್ರಧಾನಿಗಳಿಗೂ ಇದು ಅವಮಾನ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮೂರೂವರೆ ದಶಕದ ನಂತರ ಒಂದಾದ ಕಮಲ್ ಹಾಸನ್ ಮತ್ತು ಮಣಿರತ್ನಂ

ಸಚಿವ ಮುನಿರತ್ನ ಬಿಜೆಪಿ ಆಹ್ವಾನಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಗಳಿಲ್ಲ ಅಂತ ಅರ್ಥ ಆಯ್ತಲ್ಲ ಎಂದು ಕುಟುಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *