ಮುಂಬೈ: ಬಾಲಿವುಡ್ ಕಿರುತೆರೆ ನಾಗಿನ್ ಮೌನಿರಾಯ್ ಮದುವೆ ನಂತರ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಹನಿಮೂನ್ಗೆ ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಮೌನಿರಾಯ್ ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೌನಿಯನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.
View this post on Instagram
ಇಂದು ಮೌನಿ ಪೂಲ್ ಬಳಿ ನಿಂತುಕೊಂಡಿದ್ದ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಚುಂಬನಗಳು ಸ್ನೋಫ್ಲೇಕ್ಗಳಾಗಿದ್ದರೆ ನಾನು ನಿಮಗೆ ಹಿಮಪಾತವನ್ನು ಕಳುಹಿಸುತ್ತೇನೆ ಎಂದು ಒಂದು ಪೋಸ್ಟ್ ಗೆ ಬರೆದುಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಬೇಬಿ, ಹೊರಗೆ ತಂಪಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?
ಮೌನಿ ತನ್ನ ಮದುವೆಯಾದ ಬಳಿಕ, ಕೊನೆಗೂ ನಾನು ನನ್ನವನನ್ನು ಕಂಡುಕೊಂಡೆ. ಕೈ-ಕೈ ಹಿಡಿದು, ಕುಟುಂಬ ಮತ್ತು ಸ್ನೇಹಿತರ ಆಶೀರ್ವಾದ ಪಡೆದು ನಾವು ಮದುವೆಯಾಗಿದ್ದೇವೆ! ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಬೇಕು. ಸೂರಜ್ ಮತ್ತು ಮೌನಿ ಎಂದು ಮದುವೆಯಾದ ಬಳಿಕ ಮದುವೆ ಫೋಟೋ ಹಂಚಿಕೊಂಡಿದ್ದರು.
View this post on Instagram
ಅದ್ಭುತವಾದ ಡ್ಯಾನ್ಸರ್ ಆಗಿರುವ ಮೌನಿ ಹಿಂದಿ ಕಿರುತೆರೆಯಲ್ಲಿ ಫುಲ್ ಫೇಮಸ್ ಆಗಿದ್ದು, ದೇವೊನ್ ಕೆ ದೇವ್ ಮಹಾದೇವ್, ಕಸ್ತೂರಿ, ಮತ್ತು ನಾಗಿನ್ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. ಅದು ಅಲ್ಲದೇ ಅವರು ರಿಯಾಲಿಟಿ ಶೋ ಗಳಲ್ಲಿಯೂ ಭಾಗವಹಿಸಿದ್ದರು. ಇದನ್ನೂ ಓದಿ: ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ
View this post on Instagram
ಸಿನಿಮಾದಲ್ಲಿಯೂ ನಟಿಸಿರುವ ಇವರು, 2018ರ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ‘ಗೋಲ್ಡ್’ ನಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ‘ಮೇಡ್ ಇನ್ ಚೈನಾ’ ಸಿನಿಮಾದಲ್ಲಿ ರಾಜಕುಮಾರ್ ರಾವ್ ಜೊತೆ ನಟಿಸಿದ್ದಾರೆ. ಪ್ರಸ್ತುತ ಮೌನಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದು, ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Leave a Reply