ಹಿಂದೂಸ್ತಾನದಲ್ಲಿ ಕೇಸರಿ ಆಡಳಿತ ನಡೆಸುತ್ತೆ: ದೇವೇಂದ್ರ ಫಡ್ನವೀಸ್

ಮುಂಬೈ: ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಪಕ್ಷದ ಮಹಾಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದ ಅವರು, ನಿಮ್ಮ ಅಧಿಕಾರ ಬಲದಿಂದ ಸ್ಥಾಪಿಸಿದ ಬಾಬ್ರಿ ಸಂರಚನೆಗಳನ್ನು ಉರುಳಿಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Uddhav Thackeray

ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರು ತಮ್ಮ ಮಗನಿಗೆ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ, ಆದರೆ ಔರಂಗಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯ ಶಿಷ್ಟಾಚಾರ ಎಂದು ಹೇಳಿಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ರಂಪಾಟ- ಸಂಬಂಧಿಯನ್ನು ಬಿಡಿಸಿದರೆ ಮಾತ್ರ ಮದುವೆ ಎಂದ ವರ!

ಶನಿವಾರ ಶಿವಸೇನೆ ನಡೆಸಿದ ರ‍್ಯಾಲಿಯನ್ನು ಮಾಸ್ಟರ್ ಸಭೆ ಎಂದು ಕರೆದ ಅವರು, ನಿನ್ನೆ ನಡೆದಿದ್ದು ಕೌರವರ ಸಭೆ, ಆದರೆ ಇಂದು ನಡೆಯುತ್ತಿರುವುದು ಪಾಂಡವರ ಸಭೆಯಾಗಿದೆ. ಉದ್ಧವ್ ಠಾಕ್ರೆ ಅವರು ನಡೆಸಿದ ರ‍್ಯಾಲಿ ನಗೆ ತರಿಸುವಂತಿತ್ತು ಎಂದಿದ್ದಾರೆ.

ಅಸಾದುದ್ದೀನ್ ಓವೈಸಿ ಹೋಗಿ ಔರಂಗಜೇಬ್ ಸಮಾಧಿಗೆ ಗೌರವ ಸಲ್ಲಿಸುತ್ತಾರೆ. ಅದನ್ನು ನೋಡಿಕೊಂಡು ಸುಮ್ಮನೆ ಇರುವ ನಿಮಗೆ ನಾಚಿಕೆಯಾಗಬೇಕು. ಗಮನದಲ್ಲಿಟ್ಟುಕೊಳ್ಳಿ ಓವೈಸಿ ಅವರೇ, ನಾಯಿ ಕೂಡ ಔರಂಗಜೇಬನ ಗುರುತನ್ನು ನೋಡಲು ಬಯಸುವುದಿಲ್ಲ, ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ

Comments

Leave a Reply

Your email address will not be published. Required fields are marked *