8 ಲಕ್ಷಕ್ಕೂ ಹೆಚ್ಚು ಜನರಿಂದ ಮುಂಬೈನಲ್ಲಿ ಪ್ರತಿಭಟನೆ- ಟ್ರಾಫಿಕ್ ಜಾಮ್

 

ಮುಂಬೈ: ಸರ್ಕಾರಿ ಕೆಲಸದಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮರಾಠ ಸಮುದಾಯದ 8 ಲಕ್ಷಕ್ಕೂ ಹೆಚ್ಚು ಜನ ಇಂದು ಬೆಳಿಗ್ಗೆ ಮುಂಬೈನಲ್ಲಿ ಮನ ಮೆರವಣಿಗೆ ನಡೆಸಿದ್ದಾರೆ.

ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಮರಾಠ ಕ್ರಾಂತಿ ಮೊರ್ಚಾದಿಂದ ಈ ಜಾಥಾ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ರೈಲು ಸಂಚಾರಕ್ಕೂ ಕೂಡ ತೊಂದರೆಯಾಗಿದೆ. ಮರಾಠ ಸಮುದಾಯದ ಯುವಕ ಯುವತಿಯರು ಹಾಗೂ ಹಿರಿಯ ನಾಗರೀಕರು ಕೇಸರಿ ಧ್ವಜಗಳನ್ನ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಗೆ ಭದ್ರತೆ ಒದಗಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಮುಂಬೈನ ಬಹುತೇಕ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸುವಂತೆ ಸುಚಿಸಲಾಗಿದೆ. ಅಲ್ಲದೆ ಇಲ್ಲಿನ ಅನೇಕ ಶಾಲೆಗಳನ್ನ ಇಂದು ಮುಚ್ಚಲಾಗಿದೆ. ಮುಂಬೈನಲ್ಲಿ ಕಚೇರಿಗಳಿಗೆ ಮಧ್ಯಾಹ್ನದ ಊಟದ ಡಬ್ಬಗಳನ್ನ ತಲುಪಿಸೋ ಡಬ್ಬಾವಾಲಾಗಳು ಇಂದು ತಮ್ಮ ಸೇವೆಯನ್ನ ಸ್ಥಗಿತಗೊಳಿಸಿದ್ದಾರೆ.

ಕೃಷಿಯಿಂದ ಅಗತ್ಯ ಆದಾಯ ಬರುತ್ತಿಲ್ಲ. ಹಾಗೇ ಉದ್ಯೋಗ ಸಿಗುತ್ತಿಲ್ಲ. ಮೀಸಲಾತಿಯಿಂದ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಸಿಗುವ ಭರವಸೆ ಇರುತ್ತದೆ ಅಂತ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆದೀ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆಯನ್ನ ನಿಲ್ಲಿಸುವುದಿಲ್ಲೆ ಂಧು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

https://twitter.com/Liberal_India1/status/895168252065796096?ref_src=twsrc%5Etfw&ref_url=http%3A%2F%2Fzeenews.india.com%2Fmumbai%2Fmaratha-kranti-morcha-delegation-arrives-at-vidhan-bhavan-to-meet-maharashtra-cm-2031383.html

 

Comments

Leave a Reply

Your email address will not be published. Required fields are marked *