ಕಾಂಗ್ರೆಸ್‍ನವರು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಲ್ಲಿಸಿಕೊಂಡಿದ್ದಾರೆ: ಈಶ್ವರಪ್ಪ

ಶಿವಮೊಗ್ಗ: ಅಭ್ಯರ್ಥಿಗಳು ಇಲ್ಲ ಎಂದು ಕಾಂಗ್ರೆಸ್‍ನವರು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರು ಇನ್ನು ಅಭ್ಯರ್ಥಿಗಳ ಹುಡುಕಾಟದಲ್ಲಿ ಇದ್ದಾರೆ. ತಮಗೆ ಅಭ್ಯರ್ಥಿಗಳು ಇಲ್ಲ ಎಂದು ಬಿಜೆಪಿಯವರ ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಲ್ಲಿಸಿಕೊಂಡಿದ್ದಾರೆ. ಬಿಜೆಪಿ ಈಗಾಗಲೇ ನಾಲ್ಕು ತಂಡ ಮಾಡಿಕೊಂಡು ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದೆ. ಯಾವ ರೀತಿ ಲೋಕಸಭೆ, ವಿಧಾನಸಭೆ, ಕಾರ್ಪೋರೇಷನ್ ಗೆದ್ದಿದ್ದೇವೋ, ಅದೇ ರೀತಿ 25 ಕ್ಷೇತ್ರದಲ್ಲಿ ಕನಿಷ್ಠ 15-16 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲದಿರುವಾಗ ಅವರು ಬರ್ಬಾದ್ ಆಗದೇ ಇನ್ನೇನು ಆಗುತ್ತದೆ. ಬರ್ಬಾದ್ ಆಗುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ಏನೋ ಸಮಾಧಾನ ಅದಕ್ಕೆ ಟೀಕೆ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಅಕಾಲಿಕ ಮಳೆ ಕುರಿತು ಮಾತನಾಡಿದ ಅವರು, ಎಲ್ಲ ಜಿಲ್ಲೆಗಳಿಗೂ ಆಯಾಯ ಸಚಿವರು ಭೇಟಿ ನೀಡಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳು ಒಟ್ಚಿಗೆ ಹೋಗಬಾರದು ಎಂದು ಚುನಾವಣಾ ಆಯೋಗ ಹೇಳಿದೆ. ಅಧಿಕಾರಿಗಳೇ ಹೋಗಿ ಪರಿಶೀಲನೆ ನಡೆಸಿ, ಸಂಪೂರ್ಣ ವರದಿ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ – ಕುಟುಂಬದ 5 ಮಂದಿ ಸಾವು

Comments

Leave a Reply

Your email address will not be published. Required fields are marked *