ಜಿಎಸ್ ಟಿ, ನೋಟ್ ಬ್ಯಾನ್‍ನಿಂದ ತೊಂದ್ರೆಯಾದ್ರೂ ಗುಜರಾತ್ ಮಂದಿ ಬಿಜೆಪಿಯನ್ನ ಬೆಂಬಲಿಸಿದ್ದಾರೆ- ಈಶ್ವರಪ್ಪ

ಶಿವಮೊಗ್ಗ: ಜಿಎಸ್‍ಟಿ ಹಾಗೂ ನೋಟ್ ಬ್ಯಾನ್ ನಿಂದ ವೈಯಕ್ತಿಕವಾಗಿ ತೊಂದರೆ ಆದರೂ ಗುಜರಾತ್ ಜನ ಬಿಜೆಪಿಯನ್ನ ಬೆಂಬಲಿಸಿದ್ದಾರೆ ಅಂತ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಗುಜರಾತ್ ಹಾಗೂ ಹಿಮಾಚಲ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದ ಜನರ ಮನಸ್ಥಿತಿ ಹೇಗಿದೆ ಅನ್ನೋದು ತೋರಿಸುವ ಚುನಾವಣೆ ಇದಾಗಿದೆ. ಮೂರು ಫಲಿತಾಂಶಗಳು ಭವಿಷ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಅಂತ ಹೇಳಿದ್ರು. ಇದನ್ನೂ ಓದಿ: ಕ್ಷಣ, ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ಫಲಿತಾಂಶ: ಮುನ್ನಡೆಯಲ್ಲಿ ಕಾಂಗ್ರೆಸ್

ಜಿಎಸ್‍ಟಿ, ನೋಟ್ ಬ್ಯಾನ್ ಹಾಗೂ ಕಾಂಗ್ರೆಸ್ ಇಲ್ಲಿ ಜಾತಿ ರಾಜಕಾರಣ ಮಾಡಿದ್ರೂ ಬಿಜೆಪಿಗೆ ಜನ ಬೆಂಬಲ ಸಿಕ್ಕಿದೆ. ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ನಿಂದ ವೈಯಕ್ತಿಕವಾಗಿ ತೊಂದ್ರೆ ಆದರೂ ಬಿಜೆಪಿ ಪಕ್ಷವನ್ನು ಗುಜರಾತ್ ಜನ ಬೆಂಬಲಿಸಿದ್ದಾರೆ. ಜಾತಿ ರಾಜಕಾರಣಕ್ಕೆ ಜನ ಬೆಂಬಲ ಕೊಡದೆ, ರಾಷ್ಟ್ರೀಯ ವಾದಕ್ಕೆ ಬೆಂಬಲ ನೀಡಿದ್ದಾರೆ ಅಂದ್ರು. ಇದನ್ನೂ ಓದಿ: ಹಿಮಾಚಲದಲ್ಲಿ ಸರಳ ಬಹುಮತದತ್ತ ಬಿಜೆಪಿ!

ಪಟೇಲ್ ಜಾತಿ ಎತ್ತಿ ಕಟ್ಟಿದ್ದರು. ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ಬಗ್ಗೆ ಅಪಪ್ರಚಾರ ಮಾಡಿದ್ರು. ಇದರ ನಡುವೆ ಫಲಿತಾಂಶ ಸಮಾಧಾನ ತಂದಿದೆ. ಗುಜರಾತ್‍ನಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ, ರಾಜ್ಯದಲ್ಲೂ ಇದೇ ಫಲಿತಾಂಶ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಅಂತ ಈಶ್ವರಪ್ಪ ನುಡಿದಿದ್ದಾರೆ.  ಇದನ್ನೂ ಓದಿ: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆಗೆ ಸಂಬಂಧವಿಲ್ಲ – ಪರಮೇಶ್ವರ್

 

Comments

Leave a Reply

Your email address will not be published. Required fields are marked *