ಮುಂಬೈ: ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವೆ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‍ನಲ್ಲಿ ಆಯೋಜಿಸಿ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಒಂದು ಪ್ರಸ್ತಾಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿಟ್ಟಿದೆ. ಆದರೆ ಈ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ಅಧ್ಯಕ್ಷರಾಗಿರುವ ಮಾರ್ಟಿನ್ ಡಾರ್ಲೋ ಬಿಸಿಸಿಐ ಜೊತೆ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ಮತ್ತು ಟೆಸ್ಟ್ ಸರಣಿಯನ್ನು ನಮ್ಮಲ್ಲಿ ಆಯೋಜಿಸಿ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಸ್ತಾಪ ಇಟ್ಟಿತ್ತು. ಆದರೆ ನಮಗೆ ಇಂತಹ ಸರಣಿ ಅಗತ್ಯವಿಲ್ಲ. ಮುಂದಿನ ಕೆಲ ವರ್ಷಗಳ ಬಳಿಕ ಈ ಬಗ್ಗೆ ತೀರ್ಮಾನಿಸುತ್ತೇವೆ. ನಮ್ಮ ಸರ್ಕಾರ ಒಪ್ಪಿದರೆ ಮಾತ್ರ ನಮ್ಮ ತಂಡ ಆಡುತ್ತದೆ ಎಂದು ಖಡಕ್ ಆಗಿ ತಿಳಿಸಿದೆ ಎಂದು ಬಿಸಿಸಿಐ ಆಪ್ತ ಮೂಲದಿಂದ ವರದಿಯಾಗಿದೆ. ಇದನ್ನೂ ಓದಿ: ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ 2012ರಿಂದ ನಡೆಯುತ್ತಿಲ್ಲ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ (ICC) ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಎದುರುಬದುರಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು 2007ರಲ್ಲಿ ಕೊನೆಯದಾಗಿ ಟೆಸ್ಟ್ ಸರಣಿ ಆಡಿದ್ದವು. ಇದನ್ನೂ ಓದಿ: ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

ಐಸಿಸಿ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪಾಲ್ಗೊಳ್ಳುತ್ತಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಈ ಎರಡು ತಂಡಗಳು ಕಾದಾಟ ನಡೆಸಲಿದೆ.

Leave a Reply