ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಟಿಮ್ ಬ್ರೆಸ್ನನ್

ಲಂಡನ್: ಇಂಗ್ಲೆಂಡ್‍ನ ಆಲ್ ರೌಂಡರ್ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಅವರ ದೇಸಿ ಕ್ಲಬ್ ವಾರ್ವಿಕ್ ಶೈರ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಈ ಬಗ್ಗೆ ಬ್ರೆಸ್ನನ್ ಮಾತನಾಡಿ, ಇದು ನನಗೆ ನಂಬಲಾಗದಷ್ಟು ಕಠಿಣ ನಿರ್ಧಾರವಾಗಿದೆ. ಆದರೆ  ಇದು ನನಗೆ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನನ್ನ ತಂಡದ ಸಹ ಆಟಗಾರರು ನಿರೀಕ್ಷಿಸಿದಷ್ಟು ಉನ್ನತ ಗುಣಮಟ್ಟವನ್ನು ತಲುಪಿಲ್ಲ. 2022ರ ಋತುವಿನಲ್ಲೂ ಕ್ರಿಕೆಟ್ ಆಡಲು ನನಗೆ ಉತ್ಸಾಹವಿದೆ ಹಾಗೂ ಮನಸಿದೆ. ಆದರೆ ನನ್ನ ದೇಹಕ್ಕಿಲ್ಲ ಎಂದು ತಿಳಿಸಿದರು.

ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಅಪಾರ ಹೆಮ್ಮೆಯಿಂದ ಹಿಂತಿರುಗಿ ನೋಡುತ್ತೇನೆ ಮತ್ತು ನನ್ನ ತವರು ಕೌಂಟಿ ಮತ್ತು ದೇಶವಾದ ವಾರ್ವಿಕ್‍ಷೈರ್ ಅನ್ನು ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವವಾಗಿದೆ. ನಾನು ಕೆಲವು ಸಾಧಕರೊಂದಿಗೆ ಹಾಗೂ ಅವರ ವಿರುದ್ಧವಾಗಿ ಆಡಿದ್ದೇನೆ. ಅದಕ್ಕೆ ನನ್ನನ್ನು ನಾನು ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ

36 ವರ್ಷದ ಬ್ರೆಸ್ನನ್ 2006ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ 23 ಟೆಸ್ಟ್ ಸೇರಿ 142 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಅವರು ಕೊನೆ ಬಾರಿ ಇಂಗ್ಲೆಂಡ್ ಪರ ಆಡಿದ್ದರು. ಇದನ್ನೂ ಓದಿ: ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದು ಆಶ್ಚರ್ಯ ತಂದಿದೆ: ರಿಕಿ ಪಾಟಿಂಗ್

Comments

Leave a Reply

Your email address will not be published. Required fields are marked *