ಭಾರತದ ಎಂಜಿನಿಯರ್ ಕ್ಷೇತ್ರದ ವೈಶಿಷ್ಟ್ಯ – ಸಿದ್ಧವಾಗುತ್ತಿದೆ ಕೇಬಲ್ ರೈಲ್ವೇ ಸೇತುವೆ

ಶ್ರೀನಗರ: ಭಾರತದ ಎಂಜಿನಿಯರ್ ಕ್ಷೇತ್ರದ ವೈಶಿಷ್ಟ್ಯಕ್ಕೆ ಹಿಡಿದ ಕನ್ನಡಿಯಂತೆ ದೇಶದ ಮೊಟ್ಟ ಮೊದಲ ಕೇಬಲ್ ಮಾದರಿಯ ರೈಲ್ವೇ ಸೇತುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಅಂಜಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದೆ.

ಉಂಧಾಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆಯ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಅಂಜಿ ನದಿಗೆ ಅಡ್ಡಲಾಗಿ ಕೇಬಲ್ ಮಾದರಿಯ ಅಂಜಿಖಾಂಡ್ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕೇಂದ್ರ ರೈಲ್ವೇ ಇಲಾಖೆ ಇದು ದೇಶದ ಎಂಜಿನಿಯರಿಂಗ್ ಕ್ಷೇತ್ರದ ಹೆಮ್ಮೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

ಸೇತುವೆ ವಿಶೇಷತೆ:
473.25 ಮೀಟರ್ ಉದ್ದವಿರುವ ಈ ಸೇತುವೆ. ನದಿಯ ಮೇಲ್ಮೈ ಪ್ರದೇಶದಿಂದ 331 ಮೀಟರ್ ಎತ್ತರ ಇರಲಿದೆ. ಒಟ್ಟು 96 ಕೇಬಲ್‍ಗಳು ಸೇತುವೆಗೆ ಆಧಾರವಾಗಿರುವಂತೆ 21.653 ಕೋಟಿ ರೂ. ವೆಚ್ಚದಲ್ಲಿ ಕೇಬಲ್‍ಗಳನ್ನು ಜೋಡಿಸಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಅಂಜಿ ನದಿಗೆ ಮೊದಲು ಚೇನಾಬ್ ಮಾದರಿಯ ಕಮಾನು ಸೇತುವೆ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆಯ ಪ್ರಕಾರ ಕಮಾನು ನಿರ್ಮಾಣಕ್ಕೆ ಅಡೆತಡೆಗಳಿದ್ದರಿಂದಾಗಿ 2016ರ ಅಕ್ಟೋಬರ್‌ನಲ್ಲಿ ಅದನ್ನು ಕೈಬಿಟ್ಟು ಕೇಬಲ್ ಮಾದರಿಯ ಸೇತುವೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಇದೀಗ ಸೇತುವೆ ನಿರ್ಮಾಣದ ಕಾಮಗಾರಿ ಬರದಿಂದ ಸಾಗಿದೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್‌ ಧ್ವಂಸವಾಗುತ್ತಾ?- ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದ ಸಿಎಂ

ಉಂಧಾಪುರ-ಶ್ರೀನಗರ-ಬಾರಾಮುಲ್ಲಾಗೆ ಸಂಪರ್ಕ ಕಲ್ಪಿಸುವ ಈ ಕೇಬಲ್ ರೈಲ್ವೇ ಯೋಜನೆಯು ಭಾರತದ ಮೊಟ್ಟ ಮೊದಲ ಕೇಬಲ್ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದು ಫ್ರಾನ್ಸ್‍ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿರುವುದು ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *