ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್

ಕೀವ್: ರಷ್ಯಾ, ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಮಂದುವರೆಸಿದೆ. ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಾವು, ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ರಷ್ಯಾ ದಾಳಿಗೆ ಬಲಿಯಾದ ಮಕ್ಕಳನ್ನು ಸ್ಮರಿಸಲು ಖಾಲಿ ಸ್ಟ್ರಾಲರ್ಸ್‌ಗಳನ್ನು (Strollers) ಇಟ್ಟು  ಉಕ್ರೇನ್‌ ಮಂದಿ ಸ್ಮರಿಸಿದ್ದಾರೆ.

ಉಕ್ರೇನ್‍ನಲ್ಲಿ ಯುದ್ಧದಲ್ಲಿ ಪ್ರಾಣ ಬಿಟ್ಟವರಿಗಾಗಿ ಶೋಕಿಸುತ್ತಿರುವಾಗ, ರಷ್ಯಾದ ಆಕ್ರಮಣದ ನಂತರ ದೇಶದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಲು ಎಲ್ವಿವ್ (Lviv) ನಗರದ ಕೇಂದ್ರ ಚೌಕದಲ್ಲಿ ಮಕ್ಕಳನ್ನೂ ಕೂರಿಸುವ ನೂರಾರು ಸ್ಟ್ರಾಲರ್ಸ್‌ಗಳನ್ನು ಸಾಲಾಗಿ ಇಟ್ಟು ಸ್ಮರಿಸಲಾಯಿತ್ತು.

ಎಲ್ವಿವ್ ಸಿಟಿ ಹಾಲ್‍ನಲ್ಲಿ 109 ಸ್ಟ್ರಾಲರ್ಸ್ ಅಥವಾ ತಳ್ಳುಗಾಡಿಗಳನ್ನು ಅಚ್ಚುಕಟ್ಟಾಗಿ ಸಾಲುಗಳಲ್ಲಿ ಇರಿಸಲಾಗಿತ್ತು. ಉಕ್ರೇನಿಯನ್ ಅಧಿಕಾರಿಗಳ ಪ್ರಕಾರ, ಯುದ್ಧದ ಪ್ರಾರಂಭದಿಂದಲೂ ಕೊಲ್ಲಲ್ಪಟ್ಟ ಪ್ರತಿ ಮಗುವಿನ ನೆನೆದು ಇವಾಗಿವೆ ಎಂದಿದ್ದಾರೆ.

ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ, ಈ ರೀತಿಯ ಸ್ಟ್ರಾಲರ್‍ಗಳಲ್ಲಿ ಕುಳಿತಿರುವಾಗ ಅವರನ್ನು ನೆನಪಿಸಿಕೊಳ್ಳಿ ಎಂದು ರಷ್ಯಾದ ತಾಯಂದಿರನ್ನು ಉದ್ದೇಶಿಸಿ ಮಾತನಾಡುತ್ತಾ ಉಕ್ರೇನಿಯನ್ ಮೂಲದ ಕೆನಡಾದ ಪ್ರಜೆ ಜುರಾವ್ಕಾ ನಟಾಲಿಯಾ ಟೊಂಕೊವಿಟ್ ಹೇಳಿದರು.

ಪ್ರಾಣ ಬಿಟ್ಟ ಕೆಲವು ಮಕ್ಕಳ ಸ್ಟ್ರಾಲರ್‍ಗಳನ್ನು ಇಲ್ಲಿ ಇಟ್ಟಿಲ್ಲ, ಯಾಕೆಂದೆರೆ ಅವರೆಲ್ಲ ಇಂದು ನಮ್ಮ ಜೊತೆಗೆ ಇಲ್ಲ. ನಿಮ್ಮ ಸ್ವಂತ ಮಕ್ಕಳೊಂದಿಗೆ ಹೋಲಿಕೆ ಮಾಡಿ. ನಿಮ್ಮ ಸ್ವಂತ ಮಕ್ಕಳ ಬಗ್ಗೆ ನಿಮ್ಮ ಭಾವನೆಗಳನ್ನು ನೆನಪಿಡಿ ಎಂದು ಹೇಳುತ್ತಾ ಯುದ್ಧದಲ್ಲಿ ಪ್ರಾಣ ಬಿಟ್ಟ ಮಕ್ಕಳನ್ನು ಸ್ಮರಿಸಲಾಯಿತ್ತು.

Comments

Leave a Reply

Your email address will not be published. Required fields are marked *