ಭಾಷಣದ ವೇಳೆ Emergency Alert Message- ಬಿಜೆಪಿಯವ್ರೂ ಅಲರ್ಟ್ ಆಗ್ಲಿ ಅಂತಾ ನಕ್ಕ ಡಿಕೆಶಿ

ಬೆಂಗಳೂರು: ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಮೊಬೈಲ್‍ಗೆ ಬೀಪ್ ಶಬ್ದದ ಜೊತೆ ಅಲರ್ಟ್ ಮೆಸೇಜ್ ಬಂದಿದೆ.

ಇಂದು ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ (Emergency Alert Message) ಬಂದಿದೆ. ಡಿಕೆಶಿ ಮೊಬೈಲ್ ಸೇರಿ ಏಕಕಾಲಕ್ಕೆ ಹತ್ತಾರು ಮೊಬೈಲ್ ಗಳು ಸದ್ದು ಮಾಡಿವೆ. ಇದನ್ನೂ ಓದಿ: Emergency Alert Test- ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್

ಕೇಂದ್ರ ಸರ್ಕಾರದಿಂದ ವಿಕೋಪ ಎಚ್ಚರಿಕೆ ನೀಡುವ ಮೊಬೈಲ್ ಅಲರ್ಟ್ ಮೆಸೇಜ್ ಸದ್ದಿಗೆ ಕೈ ನಾಯಕರು ಕೊಂಚ ಗಲಿಬಿಲಿಯಾಗಿದ್ದಾರೆ. ಕೂಡಲೇ ಮಾಧ್ಯಮದವರು ವಿಕೋಪ ಮಾಹಿತಿ ಅಲಾರಂ ಎಂದು ಮಾಹಿತಿ ನೀಡಿದರು. ಈ ವೇಳೆ ಡಿಕೆಶಿ ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]