ಎಕ್ಸ್‌ನ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳು ಮನೆಗೆ

ವಾಷಿಂಗ್ಟನ್‌: ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲನ್‌ ಮಸ್ಕ್‌ (Elon Musk) ಮಾಲೀಕತ್ವದ ಎಕ್ಸ್‌ನ (X) ಸುರಕ್ಷತಾ ತಂಡದಿಂದ 1 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

ನಿಂದನೀಯ ಭಾಷೆ, ದ್ವೇಷ ಪೂರಿತ ವಿಷಯಗಳನ್ನು ಗಮನಿಸುತ್ತಿದ್ದ ಸುರಕ್ಷತಾ ತಂಡದಿಂದ (Safety Team) ಸುಮಾರು 1 ಸಾವಿರ ಉದ್ಯೋಗಿಗಳನ್ನುಎಕ್ಸ್‌ ಹೊರ ಹಾಕಿದೆ ಎಂದು ಆಸ್ಟ್ರೇಲಿಯಾದ (Australia) ಇ-ಸೇಫ್ಟಿ ಕಮಿಷನ್ ತಿಳಿಸಿದೆ. ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಿಗನಿಗೆ ಅಯೋಧ್ಯೆಯ ಮಂತ್ರಾಕ್ಷತೆ ಹಂಚಿದ ಮಲೆನಾಡಿಗರು

ಆಸ್ಟ್ರೇಲಿಯಾದ ಆನ್‌ಲೈನ್ ವಾಚ್‌ಡಾಗ್ ಇ-ಸೇಫ್ಟಿ ಕಮಿಷನ್ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ ಹೊಸ ಅಂಕಿಅಂಶಗಳ ಪ್ರಕಾರ, ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ತಂಡದಲ್ಲಿ ಸಾವಿರ ಉದ್ಯೋಗ ಕಡಿತಗಳನ್ನು ಮಾಡಲಾಗಿದೆ. ಇದು ವೇದಿಕೆಯಲ್ಲಿ ದ್ವೇಷಪೂರಿತ ವಿಷಯಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದಿದೆ.

ಟ್ವಿಟ್ಟರ್‌ನಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಮಾಜಿ ಉದ್ಯೋಗಿಗಳಿಂದ ಪಡೆದ ಮಾಹಿತಿಯನ್ನು ಆಧಾರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

ಸುರಕ್ಷತಾ ತಂಡದಲ್ಲಿದ್ದ 80% ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ. ಇಷ್ಟು ಪ್ರಮಾಣದಲ್ಲಿ ಉದ್ಯೋಗಿಗಳನ್ನು ತೆಗೆದ ಪರಿಣಾಮ ಎಕ್ಸ್‌ನಲ್ಲಿ ದ್ವೇಷಪೂರಿತ ವಿಷಯಗಳು ಹೆಚ್ಚಾಗಿವೆ ಎಂದಿದೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ವೇದಿಕೆಯಿಂದ ತೆಗೆಯದ್ದಕ್ಕೆ ಇ-ಸೇಫ್ಟಿ ಕಮಿಷನ್ ಎಕ್ಸ್‌ ಕಂಪನಿಗೆ 3,88,000 ಡಾಲರ್‌ ದಂಡವನ್ನು ವಿಧಿಸಿತ್ತು. ದಂಡವನ್ನು ಪಾವತಿಸಲು ನೀಡಿದ್ದ ಗಡುವನ್ನು ಎಕ್ಸ್‌ ಮೀರಿದ್ದು ಈಗ ಈ ದಂಡವನ್ನು ರದ್ದು ಪಡಿಸಲು ಕಾನೂನಿನ ಮೊರೆ ಹೋಗಿದೆ.