ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್

_Elon Musk

ವಾಷಿಂಗ್ಟನ್: ಟ್ವಿಟ್ಟರ್‌ನ ದೊಡ್ಡ ಷೇರುದಾರನಾಗಿ ಹೊರ ಹೊಮ್ಮಿದ ಬೆನ್ನಲ್ಲೇ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಟ್ವಿಟ್ಟರ್‌ನಲ್ಲಿ ಸಮೀಕ್ಷೆ ಆರಂಭಿಸಿದ್ದಾರೆ.

ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಪಡೆದಿರುವ ಮಸ್ಕ್ ಈಗ ಅಧಿಕಾರವನ್ನು ತೋರಿಸಿಕೊಳ್ಳಲು ಪ್ರಾರಂಭಿಸಿದ್ದು ಟ್ವಿಟ್ಟರ್‌ನ ಬಹು ನಿರೀಕ್ಷಿತ ಎಡಿಟ್ ಬಟನ್ ಫೀಚರ್ ಮೇಲೆ ಜನಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ನಿಮಗೆ ಎಡಿಟ್ ಬಟನ್ ಬೇಕಾ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿರುವ ಮಸ್ಕ್ ‘yse’ ಹಾಗೂ ‘on’ ಆಯ್ಕೆಗಳನ್ನು ನೀಡಿದ್ದಾರೆ. ಇದಕ್ಕೆ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ರೀ-ಟ್ವೀಟ್ ಮಾಡಿ, ಈ ಸಮೀಕ್ಷೆಯ ಪರಿಣಾಮಗಳು ಮುಖ್ಯವಾಗುತ್ತವೆ. ದಯವಿಟ್ಟು ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

ಮಸ್ಕ್ ಸಮೀಕ್ಷೆಯಲ್ಲಿ ಒಟ್ಟು 24 ಲಕ್ಷಕ್ಕೂ ಅಧಿಕ ಜನ ಇವರೆಗೂ ಭಾಗವಹಿಸಿದ್ದಾರೆ. ಈ ಪೈಕಿ ಶೇ.73 ರಷ್ಟು ಜನ ‘yse’ ಗೆ ಓಟ್‌ ಹಾಕಿದರೆ,  ಶೇ.27ರಷ್ಟು ಜನ ‘on’ ಗೆ ಓಟ್‌ ಹಾಕಿದ್ದಾರೆ.

ಏಪ್ರಿಲ್ 1 ರಂದು ಟ್ವಿಟ್ಟರ್ ಎಡಿಟ್ ಫೀಚರ್ ತರಲಿರುವ ಬಗ್ಗೆ ಮಾಹಿತಿ ನೀಡಿತ್ತು. ಟ್ವಿಟ್ಟರ್ ಅಧಿಕೃತ ಖಾತೆಯಲ್ಲಿ ಎಡಿಟ್ ಬಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿತ್ತು. ಆದರೆ ಮೂರ್ಖರ ದಿನದಂದು ನೀಡಿರುವ ಮಾಹಿತಿಯನ್ನು ನೆಟ್ಟಿಗರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

ಟ್ವಿಟ್ಟರ್ ನಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಬಳಕೆದಾರರು ಈ ವಿಷಯವನ್ನು ಹಾಸ್ಯ ಹಾಗೂ ಹಗುರವಾಗಿ ತೆಗೆದುಕೊಂಡಿದ್ದರು. ಇದು ಹಾಸ್ಯ ಅಲ್ವಾ? ಎಂದು ಕೇಳಿದ ಬಳಕೆದಾರರಿಗೆ ಟಿಟ್ಟರ್ ಉತ್ತರವಾಗಿ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದೆ ಈ ಹೇಳಿಕೆಯನ್ನು ನಾವು ಎಡಿಟ್ ಮಾಡುವ ಸಾಧ್ಯತೆಯೂ ಇದೆ ಎಂದು ಗೊಂದಲಮಯವಾಗಿ ತಿಳಿಸಿತ್ತು.

Comments

Leave a Reply

Your email address will not be published. Required fields are marked *