ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅವರ ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಎಲಾನ್ ಮಸ್ಕ್ ಕಾಣಿಸಿಕೊಂಡಿದ್ದು, ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ (Melania Trump) ಫೋಟೋದಲ್ಲಿ ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (America Presidential Election) ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿ, 2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ವಿಜಯದ ಸಂಭ್ರಮಾಚರಣೆಯಲ್ಲಿ ಫೋಟೋ ಸೆಷನ್ ನಡೆಸಿದ್ದು, ಎಲಾನ್ ಮಸ್ಕ್ (Elon Musk) ಕಾಣಿಸಿಕೊಂಡಿದ್ದಾರೆ. ಇನ್ನೂ ಟ್ರಂಪ್ ಪತ್ನಿ ಮೆಲಾನಿಯಾ ಫೋಟೋದಲ್ಲಿ ಕಾಣಿಸಿದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಸ್ಪದ ನೀಡಿದೆ.ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

ವಿಜಯದ ಸಂಭ್ರಮದಲ್ಲಿ ಕುಟುಂಬಸ್ಥರೊಂದಿಗಿದ್ದ ಫೋಟೋವನ್ನು ಟ್ರಂಪ್ ಮೊಮ್ಮಗಳಾದ ಕೈ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ಕ್ವ್ಯಾಡ್‌ ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಕಾಣಿಸಿಕೊಂಡಿರುವುದು ಹಾಗೂ ಮೆಲಾನಿಯಾ ಟ್ರಂಪ್ ಕಾಣಿಸದೇ ಇರುವುದು ಭಾರೀ ಗಮನ ಸೆಳೆದಿದೆ.

ಪೋಸ್ಟ್ಗೆ ಹಲವರು ಕಮೆಂಟ್ ಮಾಡಿದ್ದು, ಎಲಾನ್ ಮಸ್ಕ್ ಈಗ ಟ್ರಂಪ್ ಕುಟುಂಬದ ಭಾಗವಾಗಿದ್ದಾರೆ. ಮೆಲಾನಿಯಾ ಎಲ್ಲಿ? ಎಂದು ಬರೆದುಕೊಂಡಿದ್ದಾರೆ. ಆದರೆ ತಮ್ಮ ವಿಜಯೋತ್ಸವ ಭಾಷಣದ ವೇಳೆ ಟ್ರಂಪ್ ಒಮ್ಮೆ ಭಾಷಣವನ್ನು ನಿಲ್ಲಿಸಿ ಪತ್ನಿಯನ್ನು ಚುಂಬಿಸಿ ನಂತರ ಮಾತನ್ನು ಮುಂದುವರಿಸಿದ್ದರು.ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ