ಕಾಂಪೌಂಡ್ ದಾಟಿ ಮನೆ ಆವರಣ ಪ್ರವೇಶ ಮಾಡಿದ ಜೋಡಿ ಆನೆ: ವಿಡಿಯೋ

ಹಾಸನ: ಕಾಂಪೌಂಡ್ ದಾಟಿ ಜೋಡಿ ಆನೆ ಮನೆ ಆವರಣ ಪ್ರವೇಶ ಮಾಡಿದ ಘಟನೆಯೊಂದು ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ ನಡೆದಿದೆ.

ಇಂದು ಮುಂಜಾನೆ 6 ಗಂಟೆಗೆ ಜೋಡಿ ಆನೆ ಮನೆ ಎದುರು ಬಂದಿದೆ. ಬಳಿಕ ಕ್ಲೋಸ್ ಮಾಡಲಾಗಿದ್ದ ಗೇಟ್ ಮುರಿದು ಒಳ ನುಗ್ಗಲು ಯತ್ನಿಸಿದೆ. ಒಳನುಗ್ಗಲು ಸಾಧ್ಯವಾಗದೇ ಇದ್ದಾಗ ಆನೆಗಳು ಕಾಂಪೌಂಡ್ ದಾಟಿ ಮನೆ ಆವರಣ ಪ್ರವೇಶ ಮಾಡಿದೆ.

ಆನೆ ಕಾಂಪೌಂಡ್ ಒಳಗೆ ಬಂದಿರುವುದನ್ನು ಮನೆಯವರು ನೋಡಿದ್ದಾರೆ. ಬಳಿಕ ಮನೆಯವರು ಮನೆಯಿಂದ ಹೊರಕ್ಕೆ ಬಾರದೇ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿ, ಆನೆಗಳು ಅಲ್ಲಿದ್ದ ಮನೆ ಆವರಣದೊಳಗೆ ಎಂಟ್ರಿ ಕೊಟ್ಟಿದೆ.

ಎರಡು ಸಲಗಗಳು ಕಾಂಪೌಂಡ್ ಒಳಗೆ ನುಗ್ಗಿ ಮನೆ ಪಕ್ಕದ ತೋಟದ ಕಡೆ ತೆರಳಿದೆ. ಆನೆ ಕಾಂಪೌಂಡ್ ಒಳಗೆ ನುಗ್ಗಿದ ದೃಶ್ಯವನ್ನು ಸ್ಥಳೀಯರು ಜೆಸಿಬಿಯೊಳಗೆ ಕುಳಿತು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ.

https://www.youtube.com/watch?v=Zrl-2cpdWYA

Comments

Leave a Reply

Your email address will not be published. Required fields are marked *