ಮೈಸೂರು: ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೆ ಕಾಡಿನೊಳಗೆ ನಾಪತ್ತೆಯಾಗಿದೆ.
ಜಿಲ್ಲೆಯ ಹೆಚ್.ಡಿ.ಕೋಟೆ ಬಳಿಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆ ನಾಪತ್ತೆಯಾಗಿದೆ. ಅಂತರಸಂತೆ ಬಳಿ ಕಾಣಿಸಿಕೊಂಡಿದ್ದ ಹುಲಿ, ಗ್ರಾಮದ ಹಸುಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಅರಣ್ಯ ಇಲಾಖೆಯು ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆಗಾಗಿ ದಸರಾ ಆನೆ ಅರ್ಜುನ ಜೊತೆ ನಾಲ್ಕು ಆನೆಗಳು ಬಂದಿದ್ದವು. ಈ ನಾಲ್ಕು ಆನೆಗಳಲ್ಲಿ ಅಶೋಕ ಎಂಬ ಆನೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಬೆದರಿ ಮಾವುತನನ್ನು ಕೆಳಗೆ ಬೀಳಿಸಿ ಕಾಡಿನೊಳಗೆ ನಾಪತ್ತೆಯಾಗಿದೆ.
ಸಣ್ಣಪುಟ್ಟ ಗಾಯಗಳಿಂದ ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಅರಣ್ಯ ಇಲಾಖೆಯೂ ಹುಲಿ ಕಾರ್ಯಾಚರಣೆ ನಿಲ್ಲಿಸಿ ಕಾಡಿನೊಳಗೆ ತಪ್ಪಿಸಿ ಕೊಂಡಿರುವ ಅಶೋಕ ಆನೆ ಹುಡುಕುವ ಕಾರ್ಯಚರಣೆ ಪ್ರಾರಂಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply