ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

ಕೊಲಂಬೊ: ಆಹಾರಕ್ಕಾಗಿ ಆನೆಯೊಂದು ಸಫಾರಿಗೆ ಬಂದಿದ್ದ ಜೀಪನ್ನೇ ಅಡ್ಡಹಾಕಿ ಅದರೊಳಗೆ ಸೊಂಡಿಲು ಹಾಕುವ ಮೂಲಕ ಪ್ರವಾಸಿಗರನ್ನು ಭಯಭೀತಗೊಳಿಸಿದ ಅಚ್ಚರಿಯ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.

ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ರಸ್ತೆಯ ಸಮೀಪ ಮರಗಳಿಂದ ಎಲೆ ಮತ್ತು ಹುಲ್ಲು ತಿನ್ನುತ್ತಿತ್ತು. ಈ ವೇಳೆ ಎದುರುಗಡೆಯಿಂದ ಜೀಪ್ ಬರುತ್ತಿರುವುದನ್ನು ನೋಡಿದೆ. ಅಲ್ಲದೇ ಜೀಪೊಳಗಡೆ ಆಹಾರವಿರುವುದು ಆನೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಆನೆ ಜೀಪ್ ಬಳಿ ತೆರಳಿ ಅಡ್ಡಹಾಕಿ, ಅದರೊಳಗೆ ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಭಯಗೊಂಡ ಚಾಲಕ ಆನೆಯಿಂದ ತಪ್ಪಿಸಿಕೊಳ್ಳಲೆಂದು ಜೀಪನ್ನು ವೇಗವಾಗಿ ಚಲಾಯಿಸಲು ಯತ್ನಿಸಿದ್ದಾನೆ. ಆದರೆ ಜೀಪಿನಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಭಯದಿಂದಲೇ ಆನೆಯನ್ನು ಕಂಡು ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆನೆಗೆ ಮತ್ತಷ್ಟು ಕೋಪ ಬಂದಿದೆ. ಪರಿಣಾಮ ಓರ್ವ ಪ್ರವಾಸಿಗ ಆನೆಯಿಂದ ರಕ್ಷಿಸಿಕೊಳ್ಳಲೆಂದು ಜೀಪ್ ನಿಂದ ಹಾರಲು ರೆಡಿಯಾಗಿದ್ದಾನೆ.

ಈ ಭಯಾನಕ ದೃಶ್ಯಗಳನ್ನು ರಷ್ಯಾದ ವನ್ಯಜೀವಿ ಫೋಟೋಗ್ರಾಫರ್ ಸರ್ಗಿ ಅವರು ತನ್ನ ಪತ್ನಿ ಜೊತೆ ಸಫಾರಿ ಹೋಗುತ್ತಿದ್ದ ಸೆರೆಹಿಡಿದಿದ್ದಾರೆ. ಆ ಘಟನೆ ಅದ್ಭುತ ಮತ್ತು ಭಯಹುಟ್ಟಿಸುವಂತಿತ್ತು ಅಂತ ಅವರು ಹೇಳಿದ್ದಾರೆ.

ಆನೆ ಜೋರಾಗಿ ಘೀಳಿಡುತ್ತಿತ್ತು. ಅಲ್ಲದೇ ತನ್ನ ಕಾಲಿನಿಂದ ಜೀಪನ್ನು ಉರುಳಿಸಲು ಯತ್ನಿಸುತ್ತಿತ್ತು. ತನ್ನ ಕಾಲನ್ನು ಸಿಟ್ಟಿನಿಂದ ನೆಲಕ್ಕಿಡುವಾಗ ಧೂಳು ಬರುತಿತ್ತು. ಆದ್ರೆ ಜೀಪ್ ತುಂಬಾ ಪ್ರವಾಸಿಗರು ಇದ್ದುದರಿಂದ ಆನೆಗೆ ಜೀಪನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜೀಪನ್ನು ಆನೆ ತಿರುಗಿಸಲು ಆರಂಭಿಸಿತು. ಆಗ ಜೀಪಿನಲ್ಲಿದ್ದ ಪ್ರಯಾಣಿಕರು ಕಿರಿಚಾಡಲು ಶುರುಮಾಡಿದ್ದು, ಅವರ ಕಿರಿಚೋದು, ಅಳುವುದನ್ನು ಕೇಳಿದ ಸ್ಥಳೀಯ ನಿವಾಸಿಗಳ ಗುಂಪು ಸ್ಥಳಕ್ಕೆ ದೌಡಾಯಿಸಿತ್ತು. ನಂತರ ಆನೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ.

ಈ ಆನೆ ಏಷ್ಯಾದ ಆನೆಯಾಗಿದ್ದು, ಇದು ಖಂಡದ ದೊಡ್ಡ ಸಸ್ತನಿಗಳಾಗಿವೆ. ಇದು 9 ಅಡಿ ಎತ್ತರವಾಗಿದ್ದು, ಐದು ಟನ್‍ಗಳಷ್ಟು ತೂಕವಿರುತ್ತದೆ.

Comments

Leave a Reply

Your email address will not be published. Required fields are marked *