ಚಾರ್ಜ್ ಗೆ ಹಾಕಿದ್ದಾಗ ಹೊತ್ತಿ ಉರಿಯಿತು ಎಲೆಕ್ಟ್ರಿಕ್ ಕಾರು

ಬಾಗಲಕೋಟೆ: ಎಲೆಕ್ಟ್ರಿಕ್ ಕಾರಿಗೆ ಚಾರ್ಜ್ ಹಾಕಿದಾಗ ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಕಾರುಗಳು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ನವನಗರದ 38ನೇ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇಸಾಕ್ ದಾಂಡಿಯಾ ಅವರಿಗೆ ಸೇರಿದ ಕಾರುಗಳಾಗಿದ್ದು, ಅವರು ಎಂದಿನಂತೆ ಇಲೆಕ್ಟ್ರಿಕ್ ಕಾರಿಗೆ ಚಾರ್ಜ್ ಮಾಡಲು ಪಿನ್ ಹಾಕಿದ್ದಾರೆ.

ಈ ವೇಳೆ ಶಾರ್ಟ್ ಸರ್ಕ್ಯೂಟ್  ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಅದರ ಪಕ್ಕದಲ್ಲಿಯೇ ಇನ್ನೊಂದು ಇಂಡಿಗೊ ಕಾರಿಗೂ ಸಹ ಬೆಂಕಿ ತಗುಲಿ ಅದು ಸಹ ಸುಟ್ಟು ಹೋಗಿದೆ. ತಕ್ಷಣ ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮದ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ತಂಡ ಬಂದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಮನೆ ಮುಂದೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮುಂದಿನ ಮೆಟ್ಟಿಲೂ ಕೂಡ ಸುಟ್ಟು ಹೋಗಿವೆ. ಇನ್ನೂ ಬೆಂಕಿಗೆ ಕಾರುಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *