ಫಿಲ್ಮ್ ಚೇಂಬರ್ ಗೆ ಇಂದು ಚುನಾವಣೆ : ಮಧ್ಯಾಹ್ನ 2 ಗಂಟೆಗೆ ಮತದಾನ, ರಾತ್ರಿ ಫಲಿತಾಂಶ

ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮೂರು ವರ್ಷದ ನಂತರ ಚುನಾವಣೆ ನಡೆಯುತ್ತಿರುವುದರಿಂದ ಕುತೂಹಲ ಮೂಡಿಸಿದೆ. ಈ ಬಾರಿ ನಿರ್ಮಾಪಕ ಸಾ.ರಾ.ಗೋವಿಂದು ಬಣ ಮತ್ತು ನಿರ್ಮಾಪಕ ಭಾ.ಮಾ.ಹರೀಶ್ ಬಣದ ನಡುವೆ ತುರುಸಿನ ಸ್ಪರ್ಧೆ ಏರ್ಪಾಡಾಗಿದ್ದು, ಯಾವ ಬಣಕ್ಕೆ ಅಧಿಕಾರ ಸಿಗಲಿದೆ ಎನ್ನುವುದು ಸಂಜೆ ಗೊತ್ತಾಗಲಿದೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

ಈಗಾಗಲೇ ಸರ್ವಸದಸ್ಯರ ಸಭೆಯು ನಡೆದಿದ್ದು, ಮಧ್ಯಾಹ್ನ 2 ಗಂಟೆಯಿಂದ ಮತದಾನದ ಪ್ರಕ್ರಿಯೆ ಶುರುವಾಗಲಿದೆ. ಸಾಯಂಕಾಲ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಇಂದು ರಾತ್ರಿಯೇ ಫಲಿತಾಂಶ ಕೂಡ ಹೊರಬೀಳಲಿದೆ. ಮತದಾನ ಮಾಡಲೆಂದು ಫೋಟೋ ಸಹಿತ ಬ್ಯಾಲೆಟ್ ಪೇಪರ್ ಸಿದ್ಧ ಮಾಡಲಾಗಿದೆ. ಬ್ಯಾಲೆಟ್ ಪೇಪರ್ ಮೂಲಕವೇ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ಈಗಾಗಲೇ ಸಾ.ರಾ ಗೋವಿಂದು ಮತ್ತು ಭಾ.ಮಾ ಹರೀಶ್ ಹಲವು ಸದಸ್ಯರನ್ನು ಭೇಟಿ ಮಾಡಿ ಮತ ಹಾಕುವಂತೆ ಕೇಳಿದ್ದಾರೆ. ಅಲ್ಲದೇ, ಸ್ಟಾರ್ ನಟರು ಮತ್ತು ಹೆಸರಾಂತ ನಿರ್ದೇಶಕ, ನಿರ್ಮಾಪಕರನ್ನು ಭೇಟಿ ಮಾಡಿ ತಮ್ಮವರಿಂದ ಮತ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡಿವೆ ಎನ್ನುವುದು ಇಂದು ರಾತ್ರಿಯೇ ಗೊತ್ತಾಗಲಿದೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗ 1700ಕ್ಕೂ ಹೆಚ್ಚು ಸದಸ್ಯರಿದ್ದು, ಅವರೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ನಿರ್ಮಾಪಕ, ಪ್ರದರ್ಶಕ, ವಿತರಕ ಹೀಗೆ ಹಲವು ವಿಭಾಗಗಳಲ್ಲಿ ಆಯ್ಕೆ ನಡೆಯಲಿದೆ.

Comments

Leave a Reply

Your email address will not be published. Required fields are marked *