ನೀವೇನ್ ಕೆಲಸ ಮಾಡಿದ್ದೀರಿ- ಬಿಜೆಪಿ ಪರ ಮತ ಕೇಳಲು ಹೋದ ಶಾಸಕನಿಗೆ ಜನ ತರಾಟೆ

ಕೊಪ್ಪಳ: ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಕೇಳಲು ಹೋದ ಶಾಸಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಗಂಗಾವತಿ ನಗರದ 8ನೇ ವಾರ್ಡ್ ನಲ್ಲಿ ಈ ಗಲಾಟೆ ನಡೆದಿದೆ. 8ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಪಂಪಾಪತಿ ಪರ ಪ್ರಚಾರಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಬಂದಿದ್ದರು. ಈ ವೇಳೆಯಲ್ಲಿ ಅಲ್ಲಿದ್ದ ಸಾರ್ವಜನಿಕರು ನಮಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ನೀವು ಏನು ಕೆಲಸ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಅಲ್ಲಿನ ಸಾರ್ವಜನಿಕರು ನಮ್ಮ ಏರಿಯಾಕ್ಕೆ ಪ್ರಚಾರಕ್ಕೆ ಬರಬೇಡಿ ಎಂದು ಶಾಸಕ ಪರಣ್ಣ ಮುನವಳ್ಳಿಯನ್ನು ಅಡ್ಡ ಹಾಕಿದ್ದಾರೆ. ಇದೇ ವೇಳೆ ಶಾಸಕ ಪರಣ್ಣ ಮುನವಳ್ಳಿ ಬೆಂಬಲಿಗರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ. ಶಾಸಕರು ಎಷ್ಟೆ ಪ್ರಯತ್ನ ಮಾಡಿದ್ರೂ, ಜನರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕೊನೆಗೆ ಶಾಸಕ ಪರಣ್ಣ ಅನಿವಾರ್ಯವಾಗಿ ಪ್ರಚಾರ ಮಾಡದೆ ಆ ವಾರ್ಡ್ ನಿಂದ ಕಾಲ್ಕಿತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *