ಪಕ್ಷ ಅಧಿಕಾರಕ್ಕೆ ಬಂದ್ರೆ ಹೆಣ್ಮಕ್ಕಳಿಗೆ ತೊಂದ್ರೆ ಕೊಟ್ಟವರ ಮನೆಗೆ ಬುಲ್ಡೋಜರ್ ನುಗ್ಗಿಸ್ತೇವೆ: ಬಂಡಿ ಸಂಜಯ್

ಹೈದರಾಬಾದ್: ಪಕ್ಷ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟವರ ಮನೆಗೆ ಬುಲ್ಡೋಜರ್ ನುಗ್ಗಿಸುತ್ತೇವೆ ಎಂದು ತೆಲಂಗಾಣ (Telangana) ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಹೇಳಿದ್ದಾರೆ.

ತೆಲಂಗಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ವಿರೋಧಿಸಿ ಹೈದರಾಬಾದ್‍ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತೆಲಂಗಾಣದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಪಕ್ಷ ಆದಿಕಾರಕ್ಕೆ ಬಂದ ಬಳಿಕ ಉತ್ತರಪ್ರದೇಶ (Uttarpradesh) ದ ಮಾದರಿಯಂತೆ ಅಪರಾಧಿಗಳ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವುದಾಗಿ ತಿಳಿಸಿದರು. ಇದನ್ನೂ ಓದಿ: ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ

ಇದೇ ವೇಳೆ ಹಿರಿಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಕಕ್ತಿಯಾ ವೈದ್ಯಕೀಯ ಕಾಲೇಕಿನ (ಕೆಎಂಸಿ) ಎಂಡಿ ವಿದ್ಯಾರ್ಥಿನಿ ಪ್ರೀತಿ ಎಂಬಾಕೆಯ ಸಾವಿನ ಕುರಿತು ಮಾತನಾಡಿದರು. ಪ್ರೀತಿ ಸಾವಿನ ಕುರಿತು ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *