ಮಕ್ಕಳ ಸಮ್ಮುಖದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ಜೋಡಿ

ಮೈಸೂರು: ಇಳಿ ವಯಸ್ಸಿನ ಅಜ್ಜ, ಅಜ್ಜಿ ಜೋಡಿಯೊಂದು ಮಕ್ಕಳ ಸಮ್ಮುಖದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕವಾಗಿ ಎಲ್ಲಡೆ ಸುದ್ದಿಯಾಗಿದೆ.

85 ವರ್ಷದ ಮುಸ್ತಫಾ, 65 ವರ್ಷ ಫಾತಿಮಾ ಬೇಗಂ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೃದ್ಧ ಜೋಡಿ ಮೈಸೂರಿನ ಉದಯಗಿರಿಯ ಗೌಸಿಯಾನಗರದ ನಿವಾಸಿಗಳಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆಯಾಗಿ ಸತಿಪತಿಗಳಾದ ಈ ಜೋಡಿ ನವಜೀವಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದ ಮುಸ್ತಫಾ ತನ್ನ 9 ಮಕ್ಕಳಿಗೆ ಮದುವೆ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನು ಕಳೆದುಕೊಂಡು ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು. ಒಂಟಿ ಜೀವನಕ್ಕೆ ಜೊತೆಗಾರ್ತಿ ಬೇಕೆಂದು ಹಂಬಲಿಸಿದ್ದ ಅಜ್ಜನಿಗೆ ಜೊತೆಯಾಗಿ ಒಬ್ಬರು ಬಾಳ ಸಂಗಾತಿ ಸಿಕ್ಕಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

ಫಾತಿಮಾ ಅದೇ ಏರಿಯಾದಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಮುಸ್ತಫಾ ತನ್ನನ್ನು ಮದುವೆಯಾಗುವಂತೆ ಫಾತಿಮಾ ಬೇಗಂರನ್ನು ಕೇಳಿಕೊಂಡಿದ್ದಾರೆ. ಒಂಟಿಯಾಗಿದ್ದ ಫಾತಿಮಾ, ಮುಸ್ತಫಾ ಅವರ ಮನವಿಗೆ ನಿರಾಸೆ ಮಾಡದೆ ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ. ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಛಿಸಿದ ತಂದೆಗೆ ಮಕ್ಕಳು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

ಈ ವಯಸ್ಸಿನಲ್ಲಿ ಮುಸ್ತಫಾ ಅವರ ನಿರ್ಧಾರ ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದರೂ ತಂದೆಯ ನಿರ್ಧಾರಕ್ಕೆ ಜೈ ಎಂದ ಮಕ್ಕಳು ನಿಖಾ (ಮದುವೆ) ಮಾಡಿದ್ದಾರೆ. ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾ ಬೇಗಂರನ್ನು ಮುಸ್ತಫಾ ವರಿಸಿದ್ದಾರೆ.

Comments

Leave a Reply

Your email address will not be published. Required fields are marked *