`ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

ಕೋಲ್ಕತ್ತಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ ಎಂದು ಕನ್ನಡಿಗರಾದ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ ಕನ್ನಡಲ್ಲೇ ಮನವಿ ಮಾಡಿದ್ದಾರೆ.

ಚೆನ್ನೈ ವಿರುದ್ಧ ಪಂದ್ಯದ ಬಳಿಕ ಮಾತನಾಡಿರುವ ಕೋಲ್ಕತ್ತಾ ತಂಡ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಮತ್ತು ಕೃಷ್ಣ, ಆರ್ ಸಿಬಿ ಈ ಟೂರ್ನಿಯಲ್ಲಿ ಇಲ್ಲ. ಅದ್ದರಿಂದ ತಮಗೇ ಬೆಂಬಲ ನೀಡಿ ಎಂದು ಕೇಳಿದ್ದಾರೆ.

ಇದೇ ವೇಳೆ ಈ ಸಲ ಕಪ್ ನಮ್ದೆ ಎಂದು ಹೇಳಿದ ಇಬ್ಬರು ಆಟಗಾರರು, ಕೆಕೆಆರ್ ತಂಡದಲ್ಲಿ ಹಲವರು ಕನ್ನಡಿಗರು ಆಡುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸವಿದೆ. ಅದ್ದರಿಂದ ಬೆಂಬಲ ನೀಡಿ ಎಂದು ಕನ್ನಡದಲ್ಲೇ ಮನವಿ ಮಾಡಿದರು.

ಶನಿವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೃಷ್ಣ, ಕೊನೆಯ ಓವರ್ ನಲ್ಲಿ ರನೌಟ್ ನೊಂದಿಗೆ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ದರು. ಈ ವೇಳೆ ಮಾತನಾಡಿದ ಕೃಷ್ಣ ಇನ್ನಿಂಗ್ಸ್ ಮೊದಲ ಓವರ್ ನಲ್ಲಿ 11 ರನ್ ನೀಡಿದ ವೇಳೆ ಹೆಚ್ಚಿನ ಒತ್ತಡವಾಗಿತ್ತು, ಬಳಿಕ ನನ್ನ ಮೇಲಿನ ವಿಶ್ವಾಸವನ್ನು ದೃಢಮಾಡಿ ಬೌಲ್ ಮಾಡಿದೆ ಎಂದು ಹೇಳಿದ್ದರು. ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ ಹಾಗೂ ಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಉತ್ತಪ್ಪ 34 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು.

ಈ ಬಾರಿ ಟೂರ್ನಿಯಲ್ಲಿ ಕೆಕೆಆರ್ ತಂಡ ಮಾತ್ರವಲ್ಲದೆ ರಾಜಸ್ಥಾನ ಪರ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಕೆ ಗೌತಮ್ ಆಡಿದ್ದರೆ, ಕೆಎಲ್ ರಾಹುಲ್, ಕರುಣ್, ಮಾಯಾಂಕ್ ಅಗರವಾಲ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ನಲ್ಲಿ ವಿನಯ್ ಕುಮಾರ್ ಆಡುತ್ತಿದ್ದಾರೆ.

https://www.youtube.com/watch?v=oY-HilLrKn4

Comments

Leave a Reply

Your email address will not be published. Required fields are marked *