ಬೆಂಗಳೂರು: ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಈ ಬಾರಿ ಸೈಬರ್ ಕ್ರೈಂ ಕದ ತಟ್ಟಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಶಿಕ್ಷಣ ಇಲಾಖೆ ಹೊಸ ಹೊಸ ಪ್ರಯೋಗಳನ್ನು ಮಾಡಿದರು ಟೆಕ್ನಾಲಜಿ ಬಳಸಿಕೊಂಡು ಆ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುತ್ತವೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಿಕ್ಷಣ ಇಲಾಖೆ ಚಾಪೆ ಕೆಳಗೆ ನುಸಳಿದರೆ ಪರೀಕ್ಷಾ ಅಕ್ರಮ ಎಸಗುವರು ರಂಗೋಲಿ ಕೆಳಗೆ ನುಸಳಿ ಅಕ್ರಮ ಎಸಗುತ್ತಿರುವುದು ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದೆ. ಈಗಾಗಲೇ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಹಲವು ಪ್ರಮುಖ ನಿರ್ಧಾರಗಳನ್ನು ತಗೆದುಕೊಂಡು ಯಶಸ್ವಿಯಾಗಿದೆ.

ಶಿಕ್ಷಣ ಇಲಾಖೆ ಈಗಾಗಲೇ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಮೊಬೈಲ್ ನಂಬರ್ ಗಳ ಮೇಲೆ ಗಮನ ಇಡಲಾಗುತ್ತಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪ್ರಶ್ನೆ ಪತ್ರಿಕೆ ಸಂಗ್ರಹಿಸಿಡುವ ಖಜಾನೆ, ಪ್ರಶ್ನೆ ಪತ್ರಿಕೆ ಕಾಲೇಜುಗಳಿಗೆ ಕಳುಹಿಸಿಕೊಡುವಾಗ ವಿಡಿಯೋಗಳನ್ನು ಮಾಡಿಕೊಂಡು ಪರೀಕ್ಷಾ ಅಕ್ರಮ ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ.
ಪರೀಕ್ಷಾ ಅಕ್ರಮ ತಡೆಗಟ್ಟಲು ಶಿಕ್ಷಣ ಇಲಾಖೆ ಇದೇ ರೀತಿ ಹತ್ತಾರು ಕ್ರಮಗಳನ್ನ ಕೈಗೊಂಡು ಯಶಸ್ಸು ಪಡೆದುಕೊಂಡಿದೆ. ಆದರೂ ಕೆಲ ಕಿಡಿಗೇಡಿಗಳು ಟೆಕ್ನಾಲಜಿ ಬಳಿಸಿಕೊಂಡು ಅಕ್ರಮ ಎಸಗಲು ಪ್ರಯತ್ನಿಸುತ್ತಿದ್ದಾರೆ. ಟೆಕ್ನಾಲಜಿ ಬಳಸಿ ಪರೀಕ್ಷಾ ಅಕ್ರಮ ತಡೆಗಟ್ಟಲು ಶಿಕ್ಷಣಾ ಇಲಾಖೆ ಸೈಬರ್ ಕ್ರೈಂ ಮೊರೆ ಹೋಗಿದೆ.

Leave a Reply