ಬೆಂಗಳೂರು: ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಮಧ್ಯಸ್ಥಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಬ್ಬರ ನಡುವಿನ ಅಸಮಾಧಾನ ಬಹಿರಂಗವಾಗಿದೆ.
ಮೂಲ ಸೌಕರ್ಯಗಳಿಲ್ಲ ಅಂತಾ 200 ಕಾಲೇಜು ಆರಂಭಕ್ಕೆ ಪಿಯು ಶಿಕ್ಷಣ ಕೇಂದ್ರದ ನಿರ್ದೇಶಕಿ ಸಿ.ಶಿಖಾ ಅವರು ಒಪ್ಪಿಗೆ ನೀಡಲಿಲ್ಲ. ಇದಿಂದಾಗಿ ಕೋಪಗೊಂಡ ಆಯುಕ್ತೆ ಶಾಲಿನಿ ರಜನೀಶ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಅಧಿಕಾರಿಗಳ ನಡುವೆ ಕೆಲಹೊತ್ತು ವಾಗ್ದಾಳಿ ನಡೆಯಿತು.
ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ಮೂಲ ಸೌಕರ್ಯ ಪೂರೈಸಲಾಗುತ್ತದೆ. ಹೀಗಾಗಿ ಕಾಲೇಜು ಪ್ರಾರಂಭಿಸಲು ಆಯುಕ್ತೆ ಶಾಲಿನಿ ರಜನೀಶ್ ಪಟ್ಟು ಹಿಡಿದರು. ಆದರೆ ಇದಕ್ಕೆ ಜಗ್ಗದ ನಿರ್ದೇಶಕಿ ಶಿಖಾ ಅವರು ಮೂಲ ಸೌಕರ್ಯವಿರದೇ ಕಾಲೇಜು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ಸಚಿವರ ಮಧ್ಯದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು.
https://youtu.be/Dpil431aWvM
84 ಸಂಸ್ಥೆಗಳು ಪಿಯು ಕಾಲೇಜು ಪ್ರಾರಂಭಿಸಲು ಮನವಿ ಸಲ್ಲಿಸಿದರು. ನಿರ್ದೇಶಕರ ಒಪ್ಪಿಗೆ ಇಲ್ಲದೇ ಕಾಲೇಜು ಪ್ರಾರಂಭಿಸಲು ಆಗುವುದಿಲ್ಲ. ಇದರಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿಯೇ ಸರ್ಕಾರವೇ ಇಂತಹ ನಿರ್ಧಾರ ಕೈಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಹೇಶ್ ಹೇಳಿದರು.

Leave a Reply