ಮೋದಿ ಸರ್ಕಾರದ ಕೈಗೊಂಬೆಯಾಗಿರುವ EDಗೆ ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆ ಇಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾಗಿರುವ ED ಸಾಂವಿಧಾನಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ. ಆಳುವ ಸರ್ಕಾರವೊಂದು ಸಾಂವಿಧಾನಿಕ ಸಂಸ್ಥೆಗಳನ್ನು ಇಷ್ಟು ಕೀಳುಮಟ್ಟದಲ್ಲಿ ದುರುಪಯೋಗಿಸಿಕೊಂಡ ಉದಾಹರಣೆ ಇತಿಹಾಸದಲ್ಲೇ ಇಲ್ಲ. BJPಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಇದನ್ನು ಪ್ರಜ್ಞಾವಂತ ಸಮಾಜ ಖಂಡಿಸಬೇಕಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ರಾಜಕೀಯ ಎದುರಾಳಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ, ಇಡಿ ಮತ್ತು ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಬಿಜೆಪಿ ಸಮನ್ಸ್ ನೀಡಿರುವುದು ಬಿಜೆಪಿಯ ಕುತಂತ್ರದ ಭಾಗ. ಇಡಿ, ಸಿಬಿಐ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಆದರೆ ಈ ಸಂಸ್ಥೆಗಳು ಬಿಜೆಪಿಯ ಅಂಗಸಂಸ್ಥೆಯಾಗಿವೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬೆಂಬಲಿಸಿದ್ದ ಡಚ್ ರಾಜಕಾರಣಿಗೆ ಕೊಲೆ ಬೆದರಿಕೆ

ಮೋದಿಯವರು ಪ್ರಧಾನಿಯಾದ ಬಳಿಕ ಕೇವಲ ವಿರೋಧ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಇಡಿ, ಸಿಬಿಐ ಮತ್ತು ಐಟಿ ದಾಳಿ ನಡೆದಿದೆ. ಆದರೆ ಬಿಜೆಪಿಯ ಒಬ್ಬರೇ ಒಬ್ಬರ ಮೇಲೆ ದಾಳಿ ನಡೆದಿಲ್ಲ. ಹಾಗಾದರೆ ಬಿಜೆಪಿಯವರೇನು ಸಚ್ಚಾರಿತ್ರ್ಯರೆ? ಸದ್ಗುಣ ಸಂಪನ್ನರೆ? EDಯವರ ಪ್ರಕಾರ ಆಪರೇಷನ್ ಕಮಲದಲ್ಲಿ ಕೈ ಬದಲಾದ ಸಾವಿರಾರು ಕೋಟಿ ಹಣ ಅಕ್ರಮ ಸಂಪತ್ತಲ್ಲವೆ? ಆಪರೇಷನ್ ಕಮಲಕ್ಕೆ ಹೂಡಿಕೆಯಾದ ಹಣದ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

 

 

Comments

Leave a Reply

Your email address will not be published. Required fields are marked *