ದೆಹಲಿಯಲ್ಲಿ 3.1 ತೀವ್ರತೆಯ ಭೂಕಂಪ; ಮನೆಗಳಿಂದ ಹೊರ ಓಡಿಬಂದ ಜನ

ನವದೆಹಲಿ: ದೆಹಲಿಯಲ್ಲಿ (Delhi) ಇಂದು (ಭಾನುವಾರ) ಸಂಜೆ ಭೂಕಂಪನದ (Earthquake) ಅನುಭವವಾಗಿದೆ. ಸಂಜೆ 4:08ಕ್ಕೆ ಭೂಕಂಪನದ ಅನುಭವವಾಗಿದೆ. ಈ ವೇಳೆ ಜನ ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಪ್ರಮಾಣ ಮತ್ತು ಪರಿಣಾಮದ ಬಗ್ಗೆ ಪರಿಶೀಲಿಸಲಾಗಿದೆ.

ಹರಿಯಾಣದ (Haryana) ಫರಿದಾಬಾದ್ ಬಳಿ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.1 ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‌ಗಳಲ್ಲಿ ವಾದಿಸಿ 26 ಕೇಸ್‌ಗಳನ್ನು ಗೆದ್ದಿದ್ದ ನಕಲಿ ವಕೀಲ ಅರೆಸ್ಟ್‌

ಇದರ ನಡುವೆ ಅಫ್ಘಾನಿಸ್ತಾನದಲ್ಲೂ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಹೆರತ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಸುಮಾರು 4,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಭಾರತ, ಪಾಕ್ ಪಂದ್ಯದ ವೇಳೆ ವ್ಯಕ್ತಿಯೊಂದಿಗೆ ಮಹಿಳಾ ಪೊಲೀಸ್ ಗಲಾಟೆ – ಪೊಲೀಸ್‍ಗೆ ಕಪಾಳಮೋಕ್ಷಕ್ಕೆ ಯತ್ನ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]