ಬೆಳ್ಳಂಬೆಳಗ್ಗೆ ಯಾದಗಿರಿ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ

ಯಾದಗಿರಿ: ಅಧಿಕಾರಿಗಳು ನಗರದ ಪ್ರತಿಯೊಂದು ವಾರ್ಡ್‍ಗಳಿಗೆ ಭೇಟಿ ನೀಡಬೇಕು. ವಾರಕ್ಕೊಮ್ಮೆ ಚರಂಡಿ ಹೂಳೆತ್ತಿ ಸ್ವಚ್ಛತೆಗೆ ಮೊದಲ ಆದ್ಯತೆ ವಹಿಸಿ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳಿ ಹಾಗೂ ಚಾಲ್ತಿಯಲ್ಲಿರುವ ಕಿರು ನೀರು ಸರಬರಾಜು ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಅಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ ನಗರದ ವಿವಿಧ ವಾರ್ಡಗಳಿಗೆ ಬೆಳಗ್ಗೆ ರಾಗಪ್ರಿಯಾ ಅವರು ಭೇಟಿ ನೀಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳ ಜೊತೆ ಮಾತನಾಡಿದರು. ಇದನ್ನೂ ಓದಿ:  ಸ್ವಚ್ಛ ಸರ್ವೇಕ್ಷಣೆ 2021- ಸತತ 5ನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದ ಇಂದೋರ್

ಮಾತಾಮಾಣಿಕೇಶ್ವರಿ ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅವರು ಭೇಟಿ ನೀಡಿ ನೀರಿನ ಪಿಎಚ್, ಕ್ಲೋರಿನ್ ಹಾಗೂ ಟರ್ಬುಡಿಟಿ ಟೆಸ್ಟ್ ಮಾಡಿಸಿ ಪರಿಶೀಲಿಸಿದರು.

15ನೇ ಹಣಕಾಸು ಯೋಜನೆಯಲ್ಲಿ ವಿವಿಧ ವಾರ್ಡ್ ಗಳಲ್ಲಿ ನಡೆದಿರುವ ಸಿ.ಸಿ.ರಸ್ತೆ ಕಾಮಗಾರಿ ಮತ್ತು 14ನೇ ಹಣಕಾಸು ಯೋಜನೆಯ ಕಾಂಪೌಂಡ್ ಗೋಡೆಗಳ ನಿರ್ಮಾಣದ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಖದ್ದಾಗಿ ಭೇಟಿ ನೀಡಿ ವೀಕ್ಷಿಸಿದರು. ಸರ್ವೇ ಕಾರಣದಿಂದ ಸ್ಥಗಿತವಾದ ವೀರಶೈವ ಸಮಾಜದ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಸರ್ವೇ ಮಾಡಿ ಕ್ರಮ ಕೈಗೊಳ್ಳಲು ಡಿಡಿಎಲ್‍ಆರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದನ್ನೂ ಓದಿ:  ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಕಷ್ಟ ಅನಿಸುತ್ತಿಲ್ಲ: ಎಂ.ಶಂಕರ್

Comments

Leave a Reply

Your email address will not be published. Required fields are marked *