ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

Photoshoot

ದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Photoshoot

ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.

Comments

Leave a Reply

Your email address will not be published. Required fields are marked *