ದೀಪಿಕಾ-ರಣ್‍ವೀರ್ ಮದ್ವೆಗೆ ಕಾಂಡೋಮ್ ಕಂಪೆನಿಯಿಂದ ವಿನೂತನ ವಿಶ್

ಮುಂಬೈ: ಬಾಲಿವುಡ್ ಬಾಜಿರಾವ್- ಮಸ್ತಾನಿ ಆದ ರಣ್‍ವೀರ್ ಹಾಗೂ ದೀಪಿಕಾ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇವರ ಮದುವೆಗೆ ಬಾಲಿವುಡ್ ತಾರೆಯರು, ಗಣ್ಯವ್ಯಕ್ತಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಈ ಮಧ್ಯೆ ಪ್ರತಿಷ್ಠಿತ ಕಾಂಡೋಮ್ ಕಂಪೆನಿಯೊಂದು ದೀಪ್‍ವೀರ್ ಮದುವೆಗೆ ವಿನೂತನವಾಗಿ ವಿಶ್ ಮಾಡಿದೆ.

ಡ್ಯೂರೆಕ್ಸ್ ಎಂಬ ಕಾಂಡೋಮ್ ಕಂಪೆನಿ ದೀಪಿಕಾ ಹಾಗೂ ರಣ್‍ವೀರ್ ಮದುವೆಗೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದೆ. ಡ್ಯೂರೆಕ್ಸ್ 2008ರಲ್ಲಿ ಬೇಒನ್ಸ್ ಸೂಪರ್ ಹಿಟ್ ಸಿಂಗಲ್ ಲೇಡಿಸ್ ಹಾಡಿನ ಸಾಲನ್ನು ಬರೆದು ವಿನೂತನವಾಗಿ ಶುಭಾಶಯ ತಿಳಿಸಿದೆ.

ಡ್ಯೂರೆಕ್ಸ್ ತಮ್ಮ ಟ್ವಿಟ್ಟರಿನಲ್ಲಿ, “ದೀಪಿಕಾ ಹಾಗೂ ರಣ್‍ವೀರ್ ಅಧಿಕೃತವಾಗಿ ಅದರ ಮೇಲೆ ರಿಂಗ್ ಹಾಕಿಕೊಳ್ಳುವುದಕ್ಕೆ ಶುಭಾಶಯಗಳು” ಎಂದು ಟ್ವೀಟ್ ಮಾಡಿದೆ. 2008ರಲ್ಲಿ ಸಿಂಗಲ್ ಲೇಡಿಸ್ ಹಾಡಿಗೆ ಟ್ವಿಸ್ಟ್ ನೀಡಿ ನಾವು ನಿಮ್ಮನ್ನು ಸತ್ತುವರಿಸಿದ್ದೇವೆ ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದೆ.

ಈ ಹಿಂದೆ 2017ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಟಲಿಯ ಟಸ್ಕನ್ ಅಲ್ಲಿ ಮದುವೆಯಾಗಿದ್ದಾಗ ಡ್ಯೂರೆಕ್ಸ್ ಕಂಪೆನಿ ಅವರಿಗೂ ವಿನೂತನವಾಗಿ ಶುಭಾಶಯ ತಿಳಿಸಿತ್ತು. ಡಿಸೆಂಬರ್ 12ರಂದು ಡ್ಯೂರೆಕ್ಸ್ ತಮ್ಮ ಟ್ವಿಟ್ಟರಿನಲ್ಲಿ, “ವಿರಾಟ್ ಹಾಗೂ ಅನುಷ್ಕಾ ನಿಮಗೆ ಮದುವೆಯ ಶುಭಾಶಯಗಳು. ನಿಮ್ಮ ನಡುವೆ ಡ್ಯೂರೆಕ್ಸ್ ಬಿಟ್ಟು ಏನೂ ಬರದೇ ಇರಲಿ” ಎಂದು ಟ್ವೀಟ್ ಮಾಡಿತ್ತು.

ದೀಪ್‍ವೀರ್ ಕೊಂಕಣಿ ಹಾಗೂ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಟಲಿಯಿಂದ ನ.18ಕ್ಕೆ ಭಾರತಕ್ಕೆ ವಾಪಸ್ಸಾಗಲಿರುವ ಬಾಜಿರಾವ್ ಮಸ್ತಾನಿ ದಂಪತಿ ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನ.21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

https://twitter.com/deepikapadukone/status/1063079371748057089?ref_src=twsrc%5Etfw%7Ctwcamp%5Etweetembed%7Ctwterm%5E1063079371748057089&ref_url=https%3A%2F%2Fpublictv.jssplgroup.com%2Fdeepveer-marriage-photo-reveal%2Famp

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *