ಅಂದು ವಿಜಯ್, ಇಂದು ಮಗಳಿಗೆ ದುನಿಯಾ ಸೂರಿ ಸಿನಿಮಾ

ಟ ದುನಿಯಾ ವಿಜಯ್‍ (Duniya Vijay) ಗೆ ಲೈಫ್‍ ಕೊಟ್ಟ ಹೆಗ್ಗಳಿಗೆ ದುನಿಯಾ ಸೂರಿ (Suri) ಅವರದ್ದು. ದುನಿಯಾ ಸಿನಿಮಾ ಮೂಲಕ ವಿಜಯ್‍ ಅವನ್ನು ಹೀರೋ ಮಾಡಿದವರು ಸೂರಿ. ದುನಿಯಾ ಮೂಲಕ ವಿಜಯ್‍ ಗೆ ಸಿನಿಮಾ ಜಗತ್ತಿಗೆ ಹೀರೋ ಆಗಿ ಪರಿಚಯಿಸಿದವರು. ಈಗ ವಿಜಯ್ ಮಗಳನ್ನು ನಾಯಕಿಯನ್ನಾಗಿ ಮಾಡುತ್ತಿದ್ದಾರೆ ಸೂರಿ.

ಕೆಂಡಸಂಪಿಗೆ ಸಿನಿಮಾದ ನಂತರ ಇದರ ಪಿಕ್ವೇಲ್ ಕಥೆಯನ್ನು ಹೇಳುವುದಾಗಿ ಒಂಬತ್ತು ವರ್ಷಗಳ ಹಿಂದೆಯೇ ಸೂರಿ ಪ್ರಕಟಿಸಿದ್ದರು. ಅದಕ್ಕೆ ಕಾಗೆ ಬಂಗಾರ ಅಂತಾನೂ ಹೆಸರು ಇಟ್ಟಿದ್ದರು. ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಸೂರಿ ಒಪ್ಪಿಕೊಂಡ ಕಾರಣದಿಂದಾಗಿ ಈ ಸಿನಿಮಾ ಮಾಡಿರಲಿಲ್ಲ. ಇದೀಗ ಕಾಗೆ ಬಂಗಾರಕ್ಕೆ ಮುಹೂರ್ತ ಕೂಡಿ ಬಂದಿದೆ.

ವಿರಾಟ್ ಎಂಬ ಹೊಸ ಪ್ರತಿಭೆಗಾಗಿ ಸಿನಿಮಾ ಮಾಡಲು ಹೊರಟಿದ್ದರು ಸೂರಿ. ಈಗ ಅದೇ ಚಿತ್ರಕ್ಕೆ ದುನಿಯಾ ವಿಜಯ್ ಅವರ ಮಗಳು ರಿತಾನ್ಯಳನ್ನು (Ritanya) ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ. ಅಧಿಕೃತವಾಗಿ ಮಾಹಿತಿ ಕೊಡದೇ ಇದ್ದರೂ ಸುದ್ದಿ ಬಲವಾಗಿದೆ.

 

ಅಂದು ವಿಜಯ್ ಜೊತೆ ಸಿನಿಮಾ ಮಾಡಿ ಯಶಸ್ಸು ತಂದುಕೊಟ್ಟಿದ್ದ ಸೂರಿ, ಇಂದು ವಿಜಯ್ ಮಗಳಿಗೂ ಅಂಥದ್ದೊಂದು ಯಶಸ್ಸು ಕೊಡ್ತಾರಾ ಕಾದು ನೋಡಬೇಕಿದೆ. ಒಟ್ನಲ್ಲಿ ಸುದ್ದಿಯಂತೂ ಭರ್ಜರಿಯಾಗಿದೆ.